Close

ಕುಂದಾಣ ಬೆಟ್ಟ

ನಿರ್ದೇಶನ
ವರ್ಗ ಅಡ್ವೆಂಚರ್
  • ಕುಂದಾಣ ಬೆಟ್ಟದ ವಿಹಂಗಮ ನೋಟ
  • IMG_20150920_063440928_HDR
  • kundana
  • IMG_20150920_063411136_HDR
  • 16 Kundana Fort temples
  • ಕುಂದಾಣ ಬೆಟ್ಟ
  • 10 Kundana Kote Bangalore Rural
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ 1
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ
  • ಕುಂದಾಣ ಬೆಟ್ಟ ನೋಟ
  • ಕುಂದಾಣ ಬೆಟ್ಟ ನೋಟ
  • ಕುಂದಾಣ ಬೆಟ್ಟ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಶ್ಚಿವiಕ್ಕೆ 10 ಕಿ.ಮೀ. ದೂರದಲ್ಲಿರುವ ಕುಂದಾಣ ಬಳಿ ಇರುವ ಏಕಶಿಲಾ ಬೆಟ್ಟವು ನೋಡಲು ಅಳಿಲಿನ ಆಕಾರದಲ್ಲಿದೆ. ಈ ಬೆಟ್ಟವು 61 ಮೀಟರ್ ಎತ್ತರವಿದ್ದು ಬೆಟ್ಟದ ತಿದಿಯಲ್ಲಿ ಸುಮಾರು 100 ಮೀಟರ್ ಅಗಲ 50 ಮೀಟರ ಉದ್ದವಿದ್ದು ಸಮತಟ್ಟಾಗಿದೆ.ಬೆಟ್ಟದ ಪೂರ್ವ ಭಾಗದಲ್ಲಿಇಳಿಜಾರು ದಾರಿಯಿದ್ದು,ನಾಲ್ಕು ಕಲ್ಲಿನ ಕಂಬದೊಂದಿಗೆ ಪ್ರವೇಶ ದ್ವಾರವಿದೆ.ದೇವನಹಳ್ಳಿ ಪಾಳೆಯಗಾರರ ಕಾಲದ ದ್ದಾಗಿದೆಚನ್ನರಾಯಸ್ವಾಮಿ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳು ಇವೆ. ಕುಂದಾಣವು 13 ನೇ ಶತಮಾನದ ಅಂತ್ಯಭಾಗದಲ್ಲಿ ಹೊಯ್ಸಳ ರಾಮನಾಥನ ರಾಜಧಾನಿಯಾಗಿತ್ತು.

ಕ್ರಿ.ಶ.1537 ರಲ್ಲಿ ಯಲಹಂಕ ನಾಡಿನ ಪಾಳೆಯಗಾರನಾಗಿದ್ದ ಮೊದಲನೇ ಕೆಂಪೇಗೌಡನು ವಿಜಯನಗರದ ಸಾಮ್ರಾಜ್ಯದ ಅಪ್ಪಣೆಯ ಮೇರೆಗೆ ಬೆಂಗಳೂರನ್ನು ಕಟ್ಟಲು ಉಪಕ್ರಮಿಸಿ ಆ ಸನ್ನಿವೇಶದಲ್ಲಿ ಕುಂದಾಣವು ನಾಲ್ಕು ಸುತ್ತಿನ ಕೋಟೆಯನ್ನು ಕಟ್ಟಿ ಒಂದು ಠಾಣಾ ನೆಲೆಯನ್ನಾಗಿಸಿದ ನಂತರ 1547 ರಲ್ಲಿ ದಯಾಳು ಬೈಚೇಗೌಡನು ಇಲ್ಲಿ ಜನಾರ್ಧನನ ದೇವಸ್ಥಾನವನ್ನು ಕಟ್ಟಿಸಿದ. ಕುಂದಾಣವು ಕೇವಲ ಸೇನಾ ನೆಲೆಯಾಗಿತ್ತು.ನಂತರ ಕ್ರಮೇಣ ಗ್ರಾಮವಾಗಿ ಅಭಿವೃದ್ಧಿಯಾಯ್ತೆಂದು ತಿಳಿದುಬರುತ್ತದೆ.

ಪ್ರಸ್ತುತ ಈ ಸ್ಥಳದಲ್ಲಿ ಚನ್ನರಾಯಸ್ವಾಮಿ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಿದ್ದು ವಾರ್ಷಿಕ ಜಾತ್ರೆ ನಡೆಯುತ್ತದೆ.ಈ ಸಂದರ್ಭದಲ್ಲಿ ಸಾವಿರಾರು ಜನರು ಸೇರುತ್ತಾರೆ.ವಾರಾಂತ್ಯದಲ್ಲಿ ಪ್ರವಾಸಿಗರು ಬೇಟಿನೀಡುತ್ತಾರೆ. ಏಕಶಿಲಾ ಬೆಟ್ಟವಾದ ಈ ಸ್ಥಳದಲ್ಲಿ ನಿಂತರೆ ಸುತ್ತಲಿನ ಪ್ರಕೃತಿ ವೀಕ್ಷಣೆಗೆ ತುಂಬಾ ಪ್ರಶಸ್ತವಾಗಿದೆ.ಬೆಟ್ಟದ ಮೇಲೆ ಹೋಗಲು ರಸ್ತೆಯ ವ್ಯವಸ್ಥೆ ಇದೆ.

  1. ಪ್ರವಾಸಿಗರ ಅಂಕಿ ಸಂಖ್ಯೆ: ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು ತಿಂಗಳಿಗೆ ಅಂದಾಜು 500 ರಿಂದ 1000 ದೇಶಿಯ ಪ್ರವಾಸಿಗರು ಬೇಟಿ ನೀಡುತ್ತಾರೆ.
  2. ಪ್ರಸ್ತುತ ಯಾವುದೇ ಮೂಲಭೂತ ಸೌಲಭ್ಯ ಇರುವುದಿಲ್ಲ.

ತಲುಪುವ ಬಗೆ:

ವಿಮಾನದಲ್ಲಿ

ಅಂತರಾಷ್ಟ್ರೀಯ ವಿಮಾನನಿಲ್ದಾಣ(ದೇವನಹಳ್ಳಿ)

ರೈಲಿನಿಂದ

ಬೆಂಗಳೂರು, ದೊಡ್ಡಬಳ್ಳಾಪುರ, ದೇವನಹಳ್ಳಿ

ರಸ್ತೆ ಮೂಲಕ

ಬೆಂಗಳೂರು, ದೊಡ್ಡಬಳ್ಳಾಪುರ, ದೇವನಹಳ್ಳಿ ಗಳಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯಗಳಿವೆ.