Close

ಶಿವಗಂಗೆ

ನಿರ್ದೇಶನ
ವರ್ಗ ಧಾರ್ಮಿಕ
  • ಶಿವಗಂಗೆ ಬೆಟ್ಟ
  • ಶಿವಗಂಗೆ  ಬೆಟ್ಟದ ನೋಟ

ಶಿವಗಂಗೆ ಕ್ಷೇತ್ರವು ಒಂದು ಸಾಹಸ ಮತ್ತು ಭಕ್ತಿಯ ಕೇಂದ್ರವಾಗಿದೆ. ಸುಮಾರು 804.8 ಮೀಟರ್ ಅಥವಾ 2640.3 ಅಡಿ ಎತ್ತರವಿರುವ ಸುಂದರ ಪರ್ವತ ಶಿಖರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‍ಪೇಟೆಯಿಂದ 7 ಕಿ.ಮೀ ದೂರದಲ್ಲಿ ಹಾಗೂ ಬೆಂಗಳೂರುನಿಂದ 56 ಕಿ.ಮೀ ದೂರದಲ್ಲಿದೆ. ಶಿವಗಂಗೆಯು ಭಕ್ತಿ ಪ್ರಧಾನ ತೀರ್ಥ ಯಾತ್ರೆ ಮತ್ತು ಸಾಹಸಮಯ(ಅಡ್ವೈಂಚರ್) ತಾಣವಾಗಿದೆ ದೂರದಿಂದ ಬೆಟ್ಟವು ಶಿವಲಿಂಗದ ಆಕಾರದಲ್ಲಿ ಕಾಣುತ್ತದೆ. ಶಿವಲಿಂಗವು ಶಿವನ ಒಂದು ರೂಪವಾಗಿದೆ.

ಬೆಟ್ಟದ ಮೇಲಿರು ಅನೇಕ ಜಲತಾಣಗಳನ್ನು ಪವಿತ್ರ ಗಂಗಾನದಿ ಎಂದು ನಂಬುತ್ತಾರೆ ಇದರ ಪರಿಣಾಮವಾಗಿ, ಈ ಬೆಟ್ಟವನ್ನು ಶಿವಗಂಗೆ ಎಂದು ಕರೆಯುತ್ತಾರೆ. ನಂದಿ ಕಲ್ಲಿನ ಕೆತ್ತನೆಯು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ಗಂಗಾಧರೇಶ್ವರ, ಹೊನ್ನದೇವಿ ದೇವಸ್ಥಾನ, ಒಳಕಲ್ಲು ತೀರ್ಥ ನಂದಿ ಪ್ರತಿಮೆ ಪಾತಳ ಗಂಗೆ, ಇವುಗಳ ಸಂಗಮದಿಂದ ಈ ಸ್ಥಳವನ್ನು ದಕ್ಷಿಣ ಕಾಶಿ ಅಥವಾ ದಕ್ಷಿಣ ಭಾರತದ ಕಾಶಿ ಎಂದು ಕರೆಯಲ್ಪಡುತ್ತದೆ.

ಪ್ರಮುಖವಾಗಿ ಟ್ರೆಕ್ಕಿಂಗ್ ಮತ್ತು ರಾಕ್ ಕ್ಲೈಂಬಿಂಗ್‍ಗೆ ಪ್ರಸಕ್ತ ಸ್ಥಳವಾಗಿದೆ ಇದರಿಂದ ಸಾಹಸ ಕ್ರೀಡಾ ಪ್ರವಾಸಿಗರ/ಅನ್ವೇಷಕರನ್ನು ಮತ್ತು ಬೆಟ್ಟದ ವೈಶಿಷ್ಟವನ್ನು ಸವಿಯಲು ಅತ್ಯುತ್ತಮ ಸ್ಥಳವಾಗಿದೆ

ಈ ಸ್ಥಳವು ಹೊಯ್ಸಳ ರಾಜರ ನಿಯಂತ್ರಣದಲ್ಲಿತ್ತು ಮತ್ತು ವಿಷ್ಣುವರ್ಧನನ ಪತ್ನಿ ರಾಣಿ ಶಾಂತಲ ಅವರು ಈ ಬೆಟ್ಟದಲ್ಲಿ ಖಿನ್ನತೆಯಿಂದ ಅತ್ಮಹತ್ಯೆ ಮಾಡಿಕೊಂಡರು. ಏಕೆಂದರೆ ಅವಳು ತನ್ನ ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಮಾನಸಿಕ ಖಿನ್ನತೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡರು. ಆದ್ದರಿಂದ ಈ ಸ್ಥಳವನ್ನು ಶಾಂತಲ ಡ್ರಾಪ್ ಎಂದು ಗುರುತಿಸಲಾಗಿದೆ.

16 ನೇ ಶತಮಾನದಲ್ಲಿ ಶಿವಪ್ಪನಾಯಕರಿಂದ ಈ ಗುಡ್ದದ ಕೋಟೆಯನ್ನು ಕೆಡವಲಾಗಿತ್ತು. ಆದರೆ ಬೆಂಗಳೂರಿನ ಸಂಸ್ಥಾಪಕ ಮಾಗಡಿ ಕೆಂಪೇಗೌಡರಿಂದ ಈ ಕೋಟೆಯು ಮತ್ತೆ ಸುದಾರಿಸಿತು. ಮತ್ತು ಅವರು ಈ ಕೋಟೆಯಲ್ಲಿ ಅವರ ನಿಧಿ ಭಾಗವನ್ನು ಉಳಿಸಿಕೊಂಡರು.

ಗವಿಗಂಗಾಧರೇಶ್ವರ ದೇವಸ್ಥಾನದ ಸುತ್ತಲಿನ ನಂಬಿಕೆಗಳು

ಶಿವಲಿಂಗಕ್ಕೆ ತುಪ್ಪದಿಂದ ಅಭಿಷೇಕವನ್ನು ಮಾಡಿದಾಗ ತುಪ್ಪ ಬೆಣ್ಣೆಯಾಗುತ್ತದೆ ಎನ್ನುವುದು ಅಸಕ್ತಿದಾಯಕ ಪವಾಡ. ಅಭಿಷೇಕದ ಸಮಯದಲ್ಲಿ ಭಕ್ತರು ಆ ಪವಾಡವನ್ನು ನೋಡುತ್ತಾರೆ. ಬೆಣ್ಣೆಯಾಗುವ ತುಪ್ಪಕ್ಕೆ ಔಷಧೀಯ ಶಕ್ತಿ ಇದೆ ಮತ್ತು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ. ದಂತ ಕಥೆಯ ಪ್ರಕಾರ ಈ ದೇವಾಲಯದ ಗರ್ಭಗುಡಿಯಿಂದ ರಹಸ್ಯವಾದ ಸುರಂಗವಿದೆ.

ತಲುಪುವ ಬಗೆ:

ವಿಮಾನದಲ್ಲಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 55 ಕಿಮೀ. ದೇವನಹಳ್ಳಿ

ರೈಲಿನಿಂದ

ಬೆಂಗಳೂರು ನಗರ ಮತ್ತು ಯಿಸವಂತಪುರವು 40 ಕಿ.ಮೀ ದೂರದಲ್ಲಿದೆ

ರಸ್ತೆ ಮೂಲಕ

ಕೆಎಸ್ಆರ್ಟಿಸಿ ಬಸ್ಸುಗಳು ಲಭ್ಯವಿದೆ ಮತ್ತು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು. ಬೆಂಗಳೂರಿನ ತುಮಕೂರು NH 48 ನಿಂದ 7 ಕಿಮೀ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರಿನಿಂದ ಇದು 50 ಕಿ.ಮೀ ದೂರದಲ್ಲಿದೆ.

ವೀಡಿಯೊ