Close

ಕೈಮಗ್ಗ ಮತ್ತು ಜವಳಿ ಇಲಾಖೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಕೈಮಗ್ಗ ನೇಯ್ಗೆ ಚಟುವಟಿಕೆಗಳು ಪಾರಂಪರಿಕವಾಗಿ ನಡೆಯುತ್ತಾ ಬಂದಿರುತ್ತದೆ.

ಕೈಮಗ್ಗ ನೇಯ್ಗೆ ಚಟುವಟಿಕೆಗಳು
ಕ್ರಮ ಸಂಖ್ಯೆ ತಾಲ್ಲೂಕು ಸಹಕಾರ ಸಂಘಗಳ ಸಂಖ್ಯೆ ಕೈಮಗ್ಗಗಳ ಸಂಖ್ಯೆ ವೃತ್ತಿಯಲ್ಲಿರುವವರು
1 ಹೊಸಕೋಟೆ 02 47 76
2 ದೇವನಹಳ್ಳಿ 05 38 48
3 ದೊಡ್ಡಬಳ್ಳಾಪುರ 04 19 24
4 ನೆಲಮಂಗಲ 08 29 33
  ಒಟ್ಟು 19 133 181

ಹೊಸಕೋಟೆ ತಾಲ್ಲೂಕಿನ- ನೆಲವಾಗಿಲು, ಗಣಗಲೂರು, ವಡ್ಡರಹಳ್ಳಿ, ಹೆಚ್ ಕ್ರಾಸ್, ಚಿಕ್ಕೊಂಡಹಳ್ಳಿ, ಹಿಂಡಿಗನಾಳು,ನಾರಾಯಣಕೆರೆ, ಡಿ.ಹೊಸಹಳ್ಳಿ, ಕೆ.ಅಗ್ರಹಾರ, ಸೂಲಿಬೆಲೆ, ಅರ್ಚಹಳ್ಳಿ, ಬೆಳ್ಳಿಕೆರೆ, ಸೋಮಲಾಪುರ,ದೊಡ್ಡದುನ್ನಸಂದ್ರ, ಅನುಗೊಂಡನಹಳ್ಳಿ, ದೇವನಗುಂಡಿ, ಅಂಡೇನಹಳ್ಳಿ, ವಾಘಟ್ಟ, ಮುತ್ಕೂರು, ಚೊಕ್ಕಹಳ್ಳಿ, ಸಮೇತನಹಳ್ಳಿ.ಯಮ್ಮನಹಳ್ಳಿ.ದೇವನಹಳ್ಳಿ ತಾಲ್ಲೂಕಿನ- ವಿಜಯಪುರ, ಇರಿಗೇನಹಳ್ಳಿ, ದಂಡೀಗೇನಹಳ್ಳಿ.ದೊಡ್ಡಬಳ್ಳಾಪುರ ತಾಲ್ಲೂಕಿನ – ದೊಡ್ಡಬಳ್ಳಾಪುರ ನಗರ, ನೆಲ್ಲುಗುಡ್ಡಿಗೆ,ಮಾಚಗೊಂಡನಹಳ್ಳಿ.
ನೆಲಮಂಗಲ ತಾಲ್ಲೂಕಿನ -ನೆಲಮಂಗಲ ಟೌನ್, ಬಿನ್ನಮಂಗಲ, ಬಿನ್ನಮಂಗಲ ಗುಟ್ಟೆ, ಗಾಂಧಿಗ್ರಾಮ, ಸುಬಾಷ್ ನಗರ, ದಾನೋಜಿಪಾಳ್ಯ ಮುಂತಾದ ಕಡೆ ಕೈಮಗ್ಗದ ನೇಯ್ಗೆಯ ಪಾರಂಪರಿಕ ವೃತ್ತಿಯು ಇರುತ್ತದೆ. ಜಿಲ್ಲೆಯಲ್ಲಿ ಉತ್ಪಾದಿಸುವ ಅಪ್ಪಟ ರೇಶ್ಮೇ ಸೀರೆಗಳಿಗೆ ಹೆಸರುವಾಸಿಯಾಗಿದ್ದು, ಅಪ್ಪಟ ಜರಿಯನ್ನು ಬಳಸಿ ಪಲ್ಲವ್, ಬುಟ್ಟ ಮತ್ತು ಬಾರ್ಡ್‍ರ್ ಸೀರೆಗಳಿಗೆ ಹೆಚ್ಚಿನ ಅಂದ ಮತ್ತು ಮೆರಗನ್ನು ನೀಡುವ ಮಾದರಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕೈಮಗ್ಗ ನೇಯ್ಗೆಯಲ್ಲಿ ನಿಪುಣತೆ ಹೊಂದಿರುವ ನೇಕಾರರು ಈ ವೃತ್ತಿಯಲ್ಲಿ ತೊಡಗಿರುತ್ತಾರೆ. ಪ್ರತಿ ಸೀರೆಯ ಅಂದಾಜು 850 ರಿಂದ 1000 ಗ್ರಾಂ ತೂಕದಿಂದ ಕೂಡಿರುತ್ತದೆ. ವಿಶೇಷವಾಗಿ ಹಬ್ಬ ಮತ್ತು ಮದುವೆ ಶುಭ ಸಮಾರಂಭಗಳಿಗೆ ಬಳಕೆ ಮಾಡುವ ಉತ್ತಮ ಗುಣಮಟ್ಟ ಹಾಗೂ ನೈಪುಣ್ಯತೆಯ ಆಕರ್ಷಣೀಯ ಬಣ್ಣವನ್ನು ಹೊಂದಿರುವ ಉತ್ಪನ್ನಗಳಾಗಿರುತ್ತವೆ.

ಜಿಲ್ಲೆಯಲ್ಲಿ ಉತ್ಪಾದಿಸುವ ಕೈಮಗ್ಗದ ಅಪ್ಪಟ ರೇಶ್ಮೇ ಸಿರೆಗಳಿಗೆ ಸ್ಥಳೀಯವಾಗಿ ಬೇಡಿಕೆ ಇದ್ದು ಶುಭ ಸಮಾರಂಭಗಳಿಗೆ ಬಯಸುವ ಗ್ರಾಹಕರು ಕೈಮಗ್ಗ ನೇಕಾರರ ಸಹಕಾರ ಸಂಘಗಳು ಅಸ್ತಿತ್ವದಲ್ಲಿರುವ ನೆಲವಾಗಿಲು, ವಿಜಯಪುರ ಮತ್ತು ನೆಲಮಂಗಲದ ಬಿನ್ನಮಂಗಲ ಕೈಮಗ್ಗ ಸಹಕಾರ ಸಂಘಗಳಲ್ಲಿ ಖರೀದಿಸಲು ಹೆಚ್ಚಿನ ಬೇಡಿಕೆ ಇರುವ ಉತ್ಪನ್ನಗಳು ದೊರೆಯಲಿವೆ. ಮುಂದುವರೆದು ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕತೆಯ ಅಭಿವೃದ್ಧಿ ಮತ್ತು ಉನ್ನತೀಕರಣದಿಂದ ಕೈಮಗ್ಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು ಯುವ ಪೀಳಿಗೆ ಕೈಮಗ್ಗ ವೃತ್ತಿಯನ್ನು ಬಯಸದೇ ವಿದ್ಯುತ್ ಚ್ಛಾಲಿತ ಮಗ್ಗಗಳಲ್ಲಿ ಆಕರ್ಷಣೀಯವಾಗಿದ್ದು ಹೆಚ್ಚಿನ ಉತ್ಪಾದನೆ ಮತ್ತು ಆರ್ಥಿಕ ಸಧೃಡತೆ ಹೊಂದಿ ತಮ್ಮ ದೈನಂದಿನ ಜೀವನವನ್ನು ಸುಧಾರಣೆಯತ್ತ ಬಯಸಿರುತ್ತಾರೆ.

ಕೈಮಗ್ಗದಲ್ಲಿ ರೇಷ್ಮೆ ಸೀರೆ ತಯಾರಿಸುವುದು