Close

ಸಾಮಾಜಿಕ ರಕ್ಷಣೆ ಕಾರ್ಯಕ್ರಮಗಳು

ಅಪರಾದಿಗಳ ಪರಿವೀಕ್ಷಣಾ ಅಧಿನಿಯಮ 1958 ಲೆಕ್ಕ ಶೀರ್ಷಿಕೆ – 2235-02-001-0-01 : ಕೇಂದ್ರ ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮವು ರಾಜ್ಯಾದ್ಯಂತ ಜಾರಿಯಲ್ಲಿದ್ದು ಈ ನಿಯಮದ ಮೇರೆಗೆ 21 ವರ್ಷದೊಳಗಿನ ಪ್ರಥಮ ಅಪರಾಧಿಗಳನ್ನು ಉತ್ತಮ ನಡತೆಗಾಗಿ ಪರಿವೀಕ್ಷಣೆಯಲ್ಲಿ ಇಡಲಾಗುವುದು.ಪ್ರತಿಯೊಂದು ಜಿಲ್ಲೆಯಲ್ಲಿ ಒಬ್ಬ ಜಿಲ್ಲಾ ಪರಿವೀಕ್ಷಣಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳ ಕಲ್ಯಾಣ ಸಮಿತಿಯವರು/ ಬಾಲನ್ಯಾಯ ಮಂಡಲಿಯವರು ವಹಿಸಿದ ಪ್ರಕರಣಗಳನ್ನು ಮತ್ತು ಅನೈತಿಕ ವ್ಯವಹಾರ (ತಡೆಗಟ್ಟುವ) ಕಾಯಿದೆಯಡಿಯಲ್ಲಿ ವಹಿಸಲ್ಪಟ್ಟ ಪ್ರಕರಣಗಳ ಗೃಹ ತನಿಕೆ ಹಾಹೂ ಮೇಲ್ವಿಚಾರಣೆ ನಡೆಸುತ್ತಾರೆ. ಸ್ವೀಕಾರ ಕೇಂದ್ರ ಹಾಗೂ ರಾಜ್ಯ ಮಹಿಳಾ ನಿಲಯದ ನಿವಾಸಿಯರ ಪುನರರ್ವಸತಿಗೆ ಸಂಬಂಧಪಟ್ಟಂತೆ ಗೃಹ ತನಿಖಾ ವರದಿಯನ್ನು ಹಾಗೂ ಪುನರ್ವಸತಿ ಮೇರೆಗೆ ನಿವಾಸಿಯನ್ನು ಬಿಡುಗಡೆ ಮಾಡಿದ ನಂತೆ ಮೂರು ವರ್ಷಗಳವರೆಗೂ ಮೇಲ್ವಿಚಾರಣೆ ಮಾಡುತ್ತಾರೆ.