Close

ಜಿಲ್ಲಾ ನಗರಾಭಿವೃದ್ಧಿ ಕೋಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ಐದು ನಗರ ಸ್ಥಳೀಯ ಸಂಸ್ಥೆಗಳು ಈ ಕೆಳಕಂಡಂತೆ ಇದೆ

 

ದೊಡ್ಡಬಳ್ಳಾಪುರ ನಗರಸಭೆ

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಟ್ಟು ಜನಸಂಖ್ಯೆ:93105 (2011 ರ ಜನಗಣತಿ ಪ್ರಕಾರ) ಹೊಂದಿದ್ದು, ಒಟ್ಟು 31 ವಾರ್ಡ್ಗಳು ಇರುತ್ತವೆ. ಈ ನಗರಸಭೆಯು 18.00 ಚ.ಮೀ. ಹೊಂದಿರುತ್ತದೆ. ಇಲ್ಲಿನ ಜನರು ಕೃಷಿಕ, ಕೈಮಗ್ಗ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಹೆಚ್ಚಾಗಿ ಅವಲಂಬಿಸಿರುತ್ತಾರೆ.

 

ಹೊಸಕೋಟೆ ನಗರಸಭೆ

ಹೊಸಕೋಟೆ ನಗರಸಭೆಯಲ್ಲಿ ಒಟ್ಟು ಜನಸಂಖ್ಯೆ:56,613 (2011 ರ ಜನಗಣತಿ ಪ್ರಕಾರ) ಹೊಂದಿದ್ದು, ಒಟ್ಟು 23 ವಾರ್ಡ್ಗಳು ಇರುತ್ತವೆ. ಈ ನಗರಸಭೆಯು 12.26 ಚ.ಮೀ ಹೊಂದಿರುತ್ತದೆ. ಇಲ್ಲಿನ ಜನರು ಕೃಷಿಕ, ಕೈಗಾರಿಕ ಉತ್ಪನ್ನಗಳು ಹಾಗೂ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಅವಲಂಭಿಸಿರುತ್ತಾರೆ

 

ದೇವನಹಳ್ಳಿ ಪುರಸಭೆ

ದೇವನಹಳ್ಳಿ ಪುರಸಭೆಯಲ್ಲಿ ಒಟ್ಟು ಜನಸಂಖ್ಯೆ:28,039 (2011 ರ ಜನಗಣತಿ ಪ್ರಕಾರ) ಹೊಂದಿದ್ದು, ಒಟ್ಟು 23 ವಾರ್ಡ್ಗಳು ಇರುತ್ತವೆ. ಈ ಪುರಸಭೆಯು 6.32 ಚ.ಮೀ. ಹೊಂದಿರುತ್ತದೆ. ಇಲ್ಲಿನ ಜನರು ಕೃಷಿಕ, ಕೈಮಗ್ಗ ಕೈಗಾರಿಕ ಉತ್ಪನ್ನಗಳು ಹಾಗೂ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಅವಲಂಬಿಸಿರುತ್ತಾರೆ. ಇಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವು ಇದೆ

 

ನೆಲಮಂಗಲ ನಗರಸಭೆ

ನೆಲಮಂಗಲ ನಗರಸಭೆಯಲ್ಲಿ ಒಟ್ಟು ಜನಸಂಖ್ಯೆ:28.754 (2011 ರ ಜನಗಣತಿ ಪ್ರಕಾರ) ಹೊಂದಿದ್ದು, ಒಟ್ಟು 23 ವಾರ್ಡ್ಗಳು ಇರುತ್ತವೆ. ಈ ಪುರಸಭೆಯು 6.32 ಚ.ಮೀ. ಹೊಂದಿರುತ್ತದೆ. ಇಲ್ಲಿನ ಜನರು ಕೃಷಿಕ, ಕೈಮಗ್ಗ ಕೈಗಾರಿಕ ಉತ್ಪನ್ನಗಳು ಹಾಗೂ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಅವಲಂಬಿಸಿರುತ್ತಾರೆ

 

ವಿಜಯಪುರ ಪುರಸಭೆ

ವಿಜಯಪುರ ಪುರಸಭೆಯಲ್ಲಿ ಒಟ್ಟು ಜನಸಂಖ್ಯೆ:34,866 (2011 ರ ಜನಗಣತಿ ಪ್ರಕಾರ) ಹೊಂದಿದ್ದು, ಒಟ್ಟು 23 ವಾರ್ಡ್ಗಳು ಇರುತ್ತವೆ. ಈ ಪುರಸಭೆಯು 16.00 ಚ,ಮೀ. ಹೊಂದಿರುತ್ತದೆ. ಇಲ್ಲಿನ ಜನರು ಕೃಷಿಕ, ಕೈಮಗ್ಗ, ಹೈನುಗಾರಿಕೆ, ಕೈಗಾರಿಕ ಉತ್ಪನ್ನಗಳು ಹಾಗೂ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಅವಲಂಬಿಸಿರುತ್ತಾರೆ

 

ಗುರಿಗಳು ಮತ್ತು ಉದ್ದೇಶಗಳು

  • ಇ-ಆಡಳಿತ ಮೂಲಕ ನಗರ ಸ್ಥಳೀಯ ಸರ್ಕಾರದ ಸಂಸ್ಥೆಗಳ ಗುಣಮಟ್ಟವನ್ನು ಬಲಗೊಳಿಸಲು.
  • ಹೋಸ್ಟ್ ಅಥವಾ ಡೇಟಾಬೇಸ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಪ್ಲಿಕೇಶನ್ ಸರ್ವರ್ ಹೋಸ್ಟಿಂಗ್ ವ್ಯವಸ್ಥೆ.
  • ಆನ್ ಲೈನ್ ತಂತ್ರಾಂಶಗಳ ದತ್ತಾಂಶಗಳ ನಿಯಂತ್ರಣ ಅಥವಾ ದತ್ತಾಂಶಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಗಳ ನಿಯಂತ್ರಣ ವ್ಯವಸ್ಥೆಯನ್ನು ಒದಗಿಸಲು ಅಥವಾ ವೃತ್ತಿಪರವಾಗಿ ಸ್ವೀಕೃತವಾಗಿದ್ದ ಗುಣಮಟ್ಟವನ್ನು ಮತ್ತು ಎಲ್ಲಾ ಭದ್ರತಾ ಮತ್ತು ಬ್ಯಾಕ್ಅಪ್ ಸೇವೆಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದು.
  • ನಗರ ಸ್ಥಳೀಯ ಸರ್ಕಾರದ ಸಂಸ್ಥೆಗಳೂಂದಿಗೆ ದೈನಂದಿನ ಸಂಪರ್ಕ ಮತ್ತು ಅದರ ಸಂಬಂಧಿತ ವಿಷಯಗಳ ಬಗ್ಗೆ ಸಕಾರಾತ್ಮಕ ಸೌಲಭ್ಯ ನೀಡುವ ವ್ಯವಸ್ಥೆ ಮಾಡುವುದು.
  • ನಗರ ಸ್ಥಳೀಯ ಸರ್ಕಾರದ ಸಂಸ್ಥೆಗಳಿಗೆ ಚಾಲ್ತಿಯಲ್ಲಿರುವ ಜನಪರ ಅಭಿವೃದ್ಧಿಯ ತಂತ್ರಾಂಶಗಳ ತಾಂತ್ರಿಕ ಸೌಲಭ್ಯ ಒದಗಿಸಲು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಡಳಿತವು ಸುಗಮವಾಗಿ ಸಾಗಲು ವ್ಯವಸ್ಥೆ ಮಾಡುವುದು.
  • ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿಯ ಆನ್ ಲೈನ್ ತಂತ್ರಾಂಶಗಳ ವಿನ್ಯಾಸ ಮತ್ತು ಅಸ್ತಿತ್ವದಲ್ಲಿರುವ ತಂತ್ರಾಂಶಗಳ ನವೀಕರಣ ವಿನ್ಯಾಸ ಅಗತ್ಯ ಬಿದ್ದಾಗ ನಗರ ಸ್ಥಳೀಯ ಸಂಸ್ಥೆಗಳಿಗೆ ತುರ್ತು ಅಗತ್ಯವಿದ್ದಾಗ ನವೀಕರಣದ ಸೌಲಭ್ಯಗಳ ವ್ಯವಸ್ಥೆ ಪೂರೈಸುವುದು.
  • ಆನ್ ಲೈನ್ ತಂತ್ರಾಂಶಗಳ ವಿನ್ಯಾಸ ಅಥವಾ ಪುರಸಭೆಯ ಇ-ಆಡಳಿತ ವ್ಯವಸ್ಥೆಯ ಹೊಸ ನವೀಕರಣದ ಮಾದರಿಗಳ ವಿನ್ಯಾಸ.
  • ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ನಗರ ಪ್ರದೇಶಗಳಿಗೆ ಸಂಬಂಧಿಸಿದ ಉಪಯುಕ್ತತೆಗಳನ್ನು ಡಿಜಿಟಲ್ ಮ್ಯಾಪ್ಸ್ಗಳ ಕೇಂದ್ರೀಯ ಭಂಡಾರ ನಿಯಂತ್ರಣ ಹೊಂದುವುದು ಮತ್ತು ವಿಶೇಷ ಬೆಂಬಲ ಒದಗಿಸುವುದು, ದತ್ತಾಂಶಗಳ ಕ್ರೋಢಿಕರಣ ಸಾಧಿಸುವುದು. ಮತ್ತು ಜಿ, ಆಯ್, ಎಸ್ ತಂತ್ರಾಂಶಗಳ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಸಂಬಂಧಿತ ದತ್ತಾಂಶಗಳ ಮಾಹಿತಿಗಳನ್ನು ಕಾಪಡುವುದು, ಮತ್ತು ಎಲ್ಲಾ ಸದಸ್ಯ ಸಂಸ್ಥೆಗಳು ಆವರ್ತಕ ನಕ್ಷೆಗಳ ಮೇಲೆ ನಿರ್ವಹಣೆಯ ನಿಗಾ ಇಡಲು ಪ್ರಾದೇಶಿಕ ಡೇಟಾ ಸೆಂಟರ್ ಜಿಐಎಸ್ ಲ್ಯಾಬ್ ಸೌಲಭ್ಯ ಒದಗಿಸಲು ವ್ಯವಸ್ಥೆ.
  • ನಗರ ಸ್ಥಳೀಯ ಸಂಸ್ಥೆಗಳಿಗೆ ಗುಣಮಟ್ಟತೆಯನ್ನು ಕಾಪಾಡಲು ಸ್ಥಳೀಯ ಸಾರ್ವಜನಿಕರ ವ್ಯಾಪಾರ ಪ್ರಕ್ರಿಯೆಗಳನ್ನು ಮರು ನಿರ್ವಹಣೆಯ ಸೌಲಭ್ಯಗಳನ್ನು ಒದಗಿಸುವುದು.
  • ನಗರ ಸ್ಥಳೀಯ ಸರ್ಕಾರದ ಸಂಸ್ಥೆಗಳು ಸಾರ್ವಜನಿಕ ಜೀವನದ ಸಮಕಾಲೀನ ಸಾಮಾನ್ಯ ಮಾಹಿತಿಗಳ ದತ್ತಾಂಶಗಳ ಸರಾಸರಿಯನ್ನು ನಿರ್ವಹಿಸಲು.
  • ಆನ್ ಲೈನ್ ತಂತ್ರಾಂಶಗಳ ವಿನ್ಯಾಸ ಮತ್ತು ಅಸ್ತಿತ್ವದಲ್ಲಿರುವ ತಂತ್ರಾಂಶಗಳ ನವೀಕರಣಗಳ ವ್ಯವಸ್ಥೆಯನ್ನು ಅಗತ್ಯ ಬಿದ್ದಾಗ ನಿರ್ವಹಿಸುವುದು.
  • ಐಟಿ ಮತ್ತು ಇತರೆ ವ್ಯವಸ್ಥೆಗಳ ಸಂಬಂಧಿಸಿದ ವಿಷಯಗಳ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಲಹೆ.
  • ತಂತ್ರಾಂಶಗಳ ನವೀಕರಣಗಳು ಮತ್ತು ಸಂಗ್ರಹಿಸಲಾದ ದತ್ತಾಂಶಗಳ ತಂತ್ರಾಂಶಗಳನ್ನು ಬಿಡುಗಡೆ ಮಾಡುವುದು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸುವದು.
  • ಇ-ಆಡಳಿತ ಕ್ಷೇತ್ರದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಸಾಗರೋತ್ತರ ದೇಶಗಳ ನಗರ ಸ್ಥಳೀಯ ಸಂಸ್ಥೆಗಳ ಆಧುನಿಕ, ಸಮಕಾಲೀನ ನಿರ್ವಹಣೆಯ ತರಬೇತಿ ಮತ್ತು ಭೇಟಿ ವ್ಯವಸ್ಥೆ ಮಾಡುವುದು.
  • ನಗರ ಸ್ಥಳೀಯ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು ಸೊಸೈಟಿ ಉದ್ದೇಶಗಳನ್ನು ಹೋಲುವ ಸಾಮ್ಯತೆಗಳನ್ನು ನೋಡಲು ಮತ್ತು ಯಾವುದೇ ಸ್ಥಳೀಯ ಸಂಸ್ಥೆಗಳು, ಬಾಹ್ಯ ಸ್ಥಳೀಯ ಸಂಸ್ಥೆಗಳ ಏಜೆನ್ಸಿಗಳ ಉದ್ದೇಶಗಳನ್ನು, ಸಂಸ್ಥೆ ಹೊಂದಿರುವ ಉದ್ದೇಶಗಳೊಂದಿಗೆ ಒಂದು ಗೂಡಿಸುವುದು.
  • ಸಂಸ್ಥೆಯ ತಂತ್ರಾಂಶಗಳನ್ನು ಮೇಲೆ ಹೇಳಿದ ಉದ್ದೇಶಗಳ ಸಾಧನೆಗಳ ಸಂಭವನೀಯತೆಯೂ ಅಥವಾ ಇತರ ಎಲ್ಲ ರೀತಿಯ ಕಾರ್ಯಗಳು ಸಮಕಾಲೀನ ಕಾನೂನುಬದ್ಧತೆಗೆ ಒಳಪಡಿಸುವುದು ಮತ್ತು ಸಮಕಾಲೀನ ಕಾನೂನು ನಿಯಮಗಳನ್ನು ಪಾಲಿಸುವದು.
  • ಇ-ಆಡಳಿತ ಸಮಸ್ಯೆಗಳು ಅಥವಾ ಸರ್ಕಾರದ ಯೋಜನೆಯ ನಿಧಿ ಉದ್ದೇಶಗಳು ಮತ್ತು ಇಂತಹ ಯೋಜನೆಗಳ ಗುರಿ ಸಾಧಿಸಲು ಸರ್ಕಾರ ನಿಗದಿಪಡಿಸಿದ ಕಾರ್ಯಗಳಲ್ಲಿ ಸಂಶೋಧನಾ ಯೋಜನೆಗಳಲ್ಲಿ ಸಂಶೋಧನೆ ನಿರ್ವಹಣೆ ಮಾಡಲು, ಮತ್ತು ನಿಗದಿ ಪಡಿಸಿದ ಅವಧಿಯೊಳಗೆ ಸಾರ್ವಜನಿಕರಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಸಪಲವಾಗುವಂತೆ ಅವುಗಳ ಮೇಲೆ ನಿಗಾ ಇಡಲು, ಕಾರ್ಯಗತಗೊಳಿಸಲು ಮತ್ತು ಅಗತ್ಯವಾಗಬಹುದು ಇಂತಹ ಭರವಸೆ ಮತ್ತು ಕಾರ್ಯಗಳು ತಲುಪುವಂತೆ ಮಾಡುವುದು.

 

ಕಛೇರಿ ವಿಳಾಸ:-

ಯೋಜನಾನಿರ್ದೇಶಕರು,ಜಿಲ್ಲಾನಗರಾಭಿವೃದ್ಧಿಕೋಶ,
ಜಿಲ್ಲಾಧಿಕಾರಿಗಳ ಕಛೇರಿ ,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು.

 

ಇ-ಮೇಲ್ :dudc_blr@yahoo[dot]co[dot]in
itstaff_dudc_blr@yahoo[dot]com

 

ದೂರವಾಣಿ ಸಂಖ್ಯೆ: 080-22862850
ಪೇಕ್ಸ್ ಸಂಖ್ಯೆ:080-22860220