Close

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಪಕ್ಷಿನೋಟ

ದೇಶಕ್ಕೆ ಸ್ವಾತಂತ್ರ ಬಂದು ಭಾಷಾವಾರು ಪ್ರಾಂತಗಳ ರಚನೆಯಾದ ನಂತರ ಕನ್ನಡ ಅಭಿವೃದ್ಧಿಗಾಗಿ “ಭಾಷೆ ಮತ್ತು ಕನ್ನಡ ಅಭಿವೃದ್ಧಿ ನಿರ್ದೇಶನಾಲಯ” ಕೆಲಸ ಮಾಡುತ್ತಿತ್ತು.ಸಂಸ್ಕೃತಿಗೆ ಕುರಿತಾದ ವಿಷಯಗಳು ಪಠ್ಯಪುಸ್ತಕ ನಿರ್ದೇಶನಾಲಯದ ವ್ಯಾಪ್ತಿಯಲ್ಲಿತ್ತು. “ಪರಸ್ಪರ ಪೂರಕವಾಗಿರುವ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಒಂದೇ ಇಲಾಖೆಯ ವ್ಯಾಪ್ತಿಯಲ್ಲಿ ತರಬೇಕು ಎಂಬ ಚಿಂತನೆ 70ರ ದಶಕದಲ್ಲಿ ಆರಂಭವಾಯಿತು.ಇದು 1977ರಲ್ಲಿ ಕಾರ್ಯರೂಪಕ್ಕೆ ಬಂದು, ‘ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ’ ದ ಸ್ಥಾಪನೆಯಾಯಿತು.  ನಂತರ ಒಂದೇ ಆಗಿದ್ದ “ಬೆಂಗಳೂರು” ಕಂದಾಯ ಜಿಲ್ಲೆ 1986ರಲ್ಲಿ ಪ್ರತ್ಯೇಕವಾಗಿ ಆ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆ” ಎಂಬ ಕಂದಾಯ ಜಿಲ್ಲೆ ಆಸ್ತಿತ್ವಕ್ಕೆ ಬಂದಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ತಾಲ್ಲೂಕುಗಳಿರುತ್ತವೆ.

ಜಿಲ್ಲೆಯ ಐತಿಹಾಸಿಕ ಸ್ಥಳಗಳು: ದೇವನಹಳ್ಳಿ ಕೋಟೆ (ಟಿಪ್ಪು ಜನ್ಮಸ್ಥಳ); ಶಿವಗಂಗೆ ಬೆಟ್ಟ; ಮಾಕಳಿ ದುರ್ಗ, ಮಣ್ಣೆ, ಅವತಿ ಬೆಟ್ಟ; ನಲ್ಲಿಗು ಕೋಟೆ (ದೇವನಹಳ್ಳಿ); ಇಲ್ಲಿನ ನದಿಗಳು: ಆರ್ಕಾವತಿ, ದಕ್ಷಿಣ ಪಿನಾಕಿನಿ. ಧಾರ್ಮಿಕ ಕ್ಷೇತ್ರ: ಘಾಟಿ ಸುಬ್ರಹ್ಮಣ್ಯ ದೇವಾಲಯ, ಮಧುರೆ ಶನಿಮಹಾತ್ಮ ದೇಗುಲ, ದೇವನಹಳ್ಳಿ ಶ್ರೀ ವೇಣುಗೋಪಾಲಸ್ವಾಮಿ ದೇಗುಲ; ಹುಲಕಡಿ ವೀರಭದ್ರ ದೇವಾಲಯ; ವಿಜಯಪುರ ನಗರೇಶ್ವರ, ಹೊಸಕೋಟೆಯ ಅನಿಮುಕ್ತೇಶ್ವರ ದೇವಾಲಯ; ನೆಲಮಂಗಲದ ಪುರಾತನ ಶಿವಗಂಗೆ ಬೆಟ್ಟ; ಸೊಂಪುರದ ಉದ್ಭವ ಸೋಮೇಶ್ವರ, ನಿಜಗಲ್ಲು ವೀರಭದ್ರಸ್ವಾಮಿ ದೇವಾಲಯಗಳು.

ಶ್ರೀಮಂತಿಕೆಯ ಜನಪದ ಕಲೆಗಳ ತಾಣ ಬೆಂಗಳೂರು ಗ್ರಾಮಾಂತರ ಜಿಲ್ಲೆ.ದೊಡ್ಡಾಟ, ಮೂಡಲಪಾಯ, ಯಕ್ಷಗಾನ ಬಯಲಾಟ, ಹುಲಿವೇಷ, ಮಹಿಳಾ ತಮಟೆ, ಲಂಬಾಣಿ ಕುಣಿತ, ಕೀಲುಕುದುರೆ, ಕರಗ ನೃತ್ಯ, ವೀರಗಾಸೆ ಮುಂತಾದ ಕಲೆಗಳ ತಾಣ.  ಶಿಲ್ಪಕಲೆಯಲ್ಲಿಯೂ ಖ್ಯಾತಿ ಪಡೆದಿರುವ ಈ ಜಿಲ್ಲೆಯ ನೆಲಮಂಗಲದ ಬಳಿಯ ಭಿನ್ನಮಂಗಲದ ಮುಕ್ತಿನಾಥೇಶ್ವರ ದೇವಾಲಯ, ಚೋಳರ ರಾಜ ರಾಜೇಂದ್ರ ಚೋಳನಿಂದ ಕಟ್ಟಲ್ಪಟ್ಟಿದ್ದು ತಂಜಾವೂರಿನ ಬೃಹದೀಶ್ವರ ದೇವಾಲಯಕ್ಕಿಂತ ಪ್ರಾಚೀನವಾದುದು. 

ಇಲಾಖೆಯ ಪ್ರಮುಖ ಯೋಜನೆಗಳು/ಕಾರ್ಯಕ್ರಮಗಳು

  1. ಕನ್ನಡ ಅಭಿವೃದ್ಧಿ – ಸರ್ಕಾರಿ ಸಿಬ್ಬಂದಿಗೆ ಆಡಳಿತ ಕಾರ್ಯಶಿಬಿರ, ಕನ್ನಡ ಶಾಸ್ತ್ರೀಯ ಭಾಷೆ, ಕನ್ನಡ ಬಾರದವರಿಗೆ ಕನ್ನಡ ಕಲಿಕೆ
  2. ಸಾಂಸ್ಕೃತಿಕ ಕಾರ್ಯಕ್ರಮಗಳು – ಚಿಗುರು, ಯುವಸೌರಭ, ಸಾಂಸ್ಕೃತಿಕ ಸೌರಭ, ಸುಗ್ಗಿಹುಗ್ಗಿ, ಮಹಿಳಾ ಸಾಂಸ್ಕೃತಿಕ ಉತ್ಸವ
  3. ರಾಷ್ಟ್ರೀಯ ಹಬ್ಬಗಳ ಆಚರಣೆ -ಜನವರಿ 26ರಂದು ಗಣರಾಜ್ಯೋತ್ಸವ ಹಾಗೂ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆ
  4. ಪ್ರೋತ್ಸಾಹ ಯೋಜನೆಗಳು -ಆಶಕ್ತ ಬಡ ಸಾಹಿತಿ-ಕಲಾವಿದರಿಗೆ ಮಾಸಾಶನ, ವೈದ್ಯಕೀಯ ನೆರವು, ಸಂಘಸಂಸ್ಥೆಗಳಿಗೆ ಪ್ರೋತ್ಸಾಹಧನ,ವಾದ್ಯಪರಿಕರ ಖರೀದಿಗೆ ಪ್ರೋತ್ಸಾಹಧನ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜನೆ, ವಿಶೇಷ ಘಟಕ ಯೋಜನೆ 
  5. ಮಹನೀಯರ ಜಯಂತಿಗಳ ಆಚರಣೆ -ಸರ್ಕಾರವು ಆದೇಶಿಸಿರುವ ಮಹನೀಯರ ಜಯಂತಿಗಳ ಆಚರಣೆ.