ಪ್ರವಾಸಿ ಸ್ಥಳಗಳು
ಭಾತರದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ, ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರವು ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರದಲ್ಲಿ ಕೇಂದ್ರಬಿಂದುವಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನೂ ಉತ್ತುಂಗಕ್ಕೇರಿಸಿದೆ. ಅಷ್ಟೆ ಅಲ್ಲದೆ, ಪ್ರವಾಸೋದ್ಯಮದ ಕಲಕ್ರಮೇಣ ಬೆಳವಣಿಗೆಯಿಂದ ಹಲವಾರು ರೆಸಾರ್ಟಗಳು, ಹೋಮ್ ಸ್ಟೇಗಳು ರಾಜ್ಯಾದ್ಯಂತ ನಿರ್ಮಾಣಗೊಂಡಿದ್ದು ಉತ್ತಮವಾದ ಪ್ರವಾಸದ ಅನುಭವವನ್ನು ಕೊಡವಲ್ಲಿ ಸಫಲವಾಗಿವೆ. ಕರ್ನಾಟಕವನ್ನು ಭೌಗೋಳಿಕವಾಗಿ ಕರಾವಳಿ ಹಾಗೂ ಮಲೆನಾಡು ಎಂದು ವಿಂಗಡಿಸಲಾಗಿದೆ ಅದರಲ್ಲೂ ಮಲೆನಾಡು ಪಶ್ಚಿಮ ಘಟ್ಟಗಳು ಮತ್ತು ಬಯಲುಸೀಮೆಯನ್ನು ಒಳಗೊಂಡಿದ್ದು, ಬಯಲುಸೀಮೆಯನ್ನು ಉತ್ತರ ಹಾಗೂ ದಕ್ಷಿಣ ಭಾಗದ ಬಯಲುಸೀಮೆಗಳೆಂದು ವಿಭಜಿಸಲಾಗಿದೆ.
1974 ರಲ್ಲಿ ಸ್ಥಾಪಿಸಲಾದ ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ನೀತಿಗಳನ್ನು ಅನಿಷ್ಠಾನಗೊಳಿಸುವ ಮತ್ತು ಸಾಗರೋತ್ತರ ಹಾಗೂ ದೇಶೀಯ ಪ್ರಚಾರವನ್ನು ಕೈಗೊಂಡು ಅಂತಿಮವಾಗಿ ಒಂದು ರಾಜ್ಯ ಹಲವು ಜಗತ್ತುಗಳು ಎಂಬ ವಾಕ್ಯವನ್ನು ಸಾಬೀತುಗೊಳಿಸುತ್ತದೆ.
ಕರ್ನಾಟಕದಲ್ಲಿಯ ಪ್ರವಾಸೋದ್ಯಮ ರಾಜ್ಯದಲ್ಲಿ 30 ಜಿಲ್ಲೆಗಳಿದ್ದು ಕರ್ನಾಟಕ ಪ್ರವಾಸೋದ್ಯಮವು ಪ್ರವಾಸಿಗರಿಗೆ ಹೆಚ್ಚಿನ ಆಯ್ಕೆಗಳನ್ನು ಕೊಡಬಲ್ಲುದಾಗಿದೆ ಪ್ರಯಾಣಿಕರೇ ಇರಲಿ ಸಾಹಸಗಾರನೇ ಇರಲಿ, ಅನ್ವೇಷಕನೇ ಇರಲಿ ಅಥವಾ ಪ್ರಾಕೃತಿಕ ಅದ್ಭುತಗಳನ್ನು ಸವಿಯ£ಬಯಸುವ ಸದಭಿರುಚಿಯ ವ್ಯಕ್ತಿಯೇ ಆಗಿರಲಿ, ಅವನ ಅಭಿರುಚಿಗೆ ತಕ್ಕ ಹಾಗೆ ಹಲವು ಬಗೆಯ ತಾಣ ಹಾಗೂ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ ಗಿರಿಧಾಮವು ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಮಹತ್ತರವಾದ ಭಾಗವಾಗಿವೆ ಇದಲ್ಲದೆ, ವೈವಿಧ್ಯಮ ಜಲಪಾತಗಳು ಪ್ರಮುಖ ಯಾತ್ರಾ ಸ್ಥಳಗಳು, ಐತಿಹಾಸಿ ಸ್ಥಳಗಳು ರಾಜ್ಯದಲ್ಲಿ ತುಂಬಿದ್ದು ಕರ್ನಾಟಕ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯನ್ನೆ ನೀಡಿದೆ.
ವಿಶ್ವಶಾಂತಿ ಆಶ್ರಮ , ವಿಜಯ ವಿಠ್ಠಲ ಮಂದಿರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಅರಿಶಿನ ಕುಂಟೆ ಗ್ರಾಮದಲ್ಲಿರುವ ವಿಜಯ ವಿಠಲ ಮಂದಿರವು ಇತ್ತೀಚಿನ ದಿನಗಳಲ್ಲಿ…