Close

ತಾಲ್ಲೂಕು ಪಂಚಾಯತಿಗಳ ಪಾತ್ರ :-

ತಾಲ್ಲೂಕು ಪಂಚಾಯತ್ ರಾಜಕೀಯ ರಚನೆ:

ಪ್ರತಿಯೊಂದು ತಾಲ್ಲೂಕು ಪಂಚಾಯಿತಿಯು

  1. ತಾಲ್ಲೂಕು ಪಂಚಾಯಿತಿಗೆ ಚುನಾಯಿತರಾದ ಸದಸ್ಯರನ್ನು ಒಳಗೊಂಡಿರತಕ್ಕದ್ದು
  2. ಯಾವ ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಸದಸ್ಯರ ಚುನಾವಣಾ ಕ್ಷೇತ್ರಗಳು ತಾಲ್ಲೋಕಿನ ಒಳಗೆ ಇದ್ದು ತಾಲ್ಲೂಕನ್ನು ಪೂರ್ತಿ ಅಥವಾ ಭಾಗಷಃ ಪ್ರತಿನಿಧಿಸುತ್ತಾರೋ ಆ ಸದಸ್ಯರನ್ನು ತಾಲ್ಲೂಕಿನಲ್ಲಿ ಮತದಾರರಾಗಿ ನೊಂದಾಯಿತರಾಗಿರುವ ರಾಜಸಭಾ ಮತ್ತು ರಾಜ್ಯವಿಧಾನ ಪರಿಷತ್ತಿನ ಸದಸ್ಯರನ್ನು ಮತ್ತು ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷನು ಚೀಟಿ ಎತ್ತುವ ಮೂಲಕ ನಿರ್ಧರಿಸುವಂತೆ, ಒಂದು ವರ್ಷದ ಅವಧಿಗೆ, ಸರದಿಯ ಪ್ರಕಾರ ತಾಲ್ಲೋಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳ ಸಂಖ್ಯೆಯ ಐದನೆಯ-ಒಂದರಷ್ಟು ಅಧ್ಯಕ್ಷರುಗಳನ್ನು ಒಳಗೊಂಡಿರತಕ್ಕದ್ದು. ಪರಂತು ಈ ಖಂಡದ ಮೇರೆಗೆ ಒಬ್ಬ ಸದಸ್ಯನಾಗಿದ್ದ ಅಧ್ಯಕ್ಷನು ಅಧ್ಯಕ್ಷನಾಗಿ ತನ್ನ ಅಧಿಕಾರ ಅವಧಿಯ ಉಳಿಕೆ ಅವಧಿಯಲ್ಲಿ ಎರಡನೇ ಅವಧಿಗೆ ಸದಸ್ಯನಾಗಲು ಅರ್ಹನಾಗತಕ್ಕದ್ದಲ್ಲ

ತಾಲ್ಲೂಕು ಪಂಚಾಯತ್ ರಚನೆ:-

ಅದ್ಯಕ್ಷ:

ತಾಲ್ಲೂಕು ಪಂಚಾಯಿತಿ ಅದ್ಯಕ್ಷನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಮುಖ್ಯಸ್ಥನಾಗಿರತಕ್ಕದ್ದು ಮತ್ತು :

  1. ತಾಲ್ಲೂಕು ಪಂಚಾಯಿತಿಯ ಸಭೆಗಳನ್ನು ಸಮಾನವೇಶಗೊಳಿಸತಕ್ಕದ್ದು ಅದರ ಅಧ್ಯಕ್ಷತೆ ವಹಿಸತಕ್ಕದ್ದು ಮತ್ತು ಅದನ್ನು ನೆಡಸತಕ್ಕದ್ದು.
  2. ಈ ಅಧಿನಿಯಮ ಮತ್ತು ಅದರಮೇರೆಗೆ ರಚಿಸಿದ ನಿಯಮಗಳ ಅಡಿಯಲ್ಲಿ ತನಗೆ ವಿಧಿಸಿದ ಎಲ್ಲಾ ಕರ್ತವ್ಯಗಳನ್ನು ನೆರೆವೇರಿಸತಕ್ಕದ್ದು ಮತ್ತು ಪ್ರಧಾನ ಮಾಡಿದ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಕಾಲಕಾಲಕ್ಕೆ ಸರ್ಕಾರವು ತನಗೆ ವಹಿಸಿ ಕೊಟ್ಟಂಥ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.
  3. ತಾಲ್ಲೂಕು ಪಂಚಾಯಿತಿಯ ಹಣಕಾಸಿನ ಮತ್ತು ಕಾರ್ಯನಿರ್ವಹಣಾ ಆಡಳಿತದ ನಿಯಂತ್ರಣ ಹಾಗೂ ಸಮಗ್ರ ಮೇಲ್ವಿಚಾರಣೆ ಮಾಡತಕ್ಕದ್ದು ಮತ್ತು ಅದಕ್ಕೆ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಯ ಆದೇಶಗಳನ್ನು ಅಗತ್ಯವೆಂದು ಕಂಡುಬರುವ ಎಲ್ಲಾ ವಿಷಯಗಳನ್ನು ಅದರ ಮುಂದಿಡತಕ್ಕದ್ದು. ಮತ್ತು ಈ ಉದ್ದೇಶಕ್ಕಾಗಿ ತಾಲ್ಲೂಕು ಪಂಚಾಯಿತಿಯ ಧಾಖಲೆಗಳನ್ನು ತರಿಸಿಕೊಳ್ಳಬಹುದು: ಮತ್ತು
  4. ತಾಲ್ಲೋಕಿನಲ್ಲಿ ಉಂಟಾದ ಪ್ರಕೃತಿ ವಿಕೋಪಗಳಿಂದ ತೊಂದರೆಗೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸುವ ಉದ್ದೇಶಕ್ಕಾಗಿ ವರ್ಷಕ್ಕೆ ಒಟ್ಟು ಇಪ್ಪತೈದು ಸಾವಿರ ರೂಪಾಯಿಗಳ ಮೊತ್ತದವರಿಗೆ ಮಂಜೂರಾತಿ ನೀಡುವ ಅಧಿಕಾರಿವನ್ನು ಹೊಂದಿರತಕ್ಕದ್ದು.
ಉಪಾದ್ಯಕ್ಷ:
ತಾಲ್ಲೂಕು ಪಂಚಾಯಿತಿಯ ಉಪಾದ್ಯಕರು:
  1. ಅದ್ಯಕ್ಷನು ಗೈರುಹಾಜರಾದಾಗ ಅಥವ ರಜೆಯ ಮೇಲಿರುವಾಗ ಅಥವಾ ಕಾರ್ಯನಿರ್ವಹಿಸಲು ಅಸಮರ್ಥನಾಗಿರುವಾಗ, ಅಥವಾ ಅಧ್ಯಕ್ಷನ ಹುದ್ದೆಯ ಖಾಲಿ ಇದ್ದಾಗ ಅಧ್ಯಕ್ಷನ ಅಧಿಕಾರಿಗಳನ್ನು ಚಲಾಯಿಸತಕ್ಕದ್ದು ಮತ್ತು,
  2. ಅಧ್ಯಕ್ಷನ ಗೈರುಹಾಜರಿಯಲ್ಲಿ ಅಥವಾ ಅಧ್ಯಕ್ಷನ ಹುದ್ದೆಯು ಖಾಲಿಯಿದ್ದಲ್ಲಿ ತಾಲ್ಲೂಕು ಪಂಚಾಯಿತಿಯ ಸಭೆಗಳ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
ಸ್ಥಾಯಿಸಮಿತಿಗಳು:

ತಾಲ್ಲೂಕು ಪಂಚಾಯಿತಿಯ ಈ ಮುಂದಿನ ಸ್ಥಾಯಿಸಮಿತಿಗಳನ್ನು ಹೊಂದಿರತಕ್ಕದ್ದು ಎಂದರೆ,

  1. ಸಾಮಾನ್ಯ ಸ್ಥಾಯಿಸಮಿತಿ
  2. ಹಣಕಾಸು ಲೆಕ್ಕಪರಿಶೋದನೆ ಮತ್ತು ಯೋಜನಾ ಸಮಿತಿ
  3. ಸಾಮಾಜಿಕ ನ್ಯಾಯ ಸಮಿತಿ.
  1. ಸಾಮಾನ್ಯ ಸ್ಥಾಯಿ ಸಮಿತಿ:

    ಸಾಮಾನ್ಯ ಸ್ಥಾಯಿ ಸಮಿತಿಯು ಸಿಬ್ಬಂದಿ ವಿಷಯಗಳು: ಸಂಪರ್ಕಗಳು,ಕಟ್ಟಡಗಳು, ಗ್ರಾಮೀಣ ಗೃಹ ನಿರ್ಮಾಣ, ಗ್ರಾಮ ವಿಸ್ತರಣಾಕಾರ್ಯಗಳು, ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ, ನೀರುಸರಬರಾಜು ಮತ್ತು ಉಳಿದ ಸಂಕೀರ್ಣ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನೆರೆವೇರಿಸತಕ್ಕದ್ದು.

  2. ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ: :

    ಈ ಸಮಿತಿಯು ತಾಲ್ಲೂಕು ಪಂಚಾಯಿತಿಯ ಹಣಕಾಸು, ಬಜೆಟ್ ರೂಪಿಸುವುದು, ಅಧಾಯ ಹೆಚ್ಚಿಸುವುದಕ್ಕಾಗಿ ಪ್ರಸ್ತಾವಗಳ ಪರಿಶೀಲನೆ, ಜಮಾ ಮತ್ತು ಖರ್ಚುಗಳ ವಿವರಣೆಯ ಪರಿಶೀಲನೆ, ತಾಲ್ಲೂಕು ಪಂಚಾಯಿತಿಯ ಹಣಕಾಸಿನ ಮೇಲೆ ಪ್ರಭಾವನ್ನು ಬೀರುವ ಎಲ್ಲಾ ಪ್ರಸ್ತಾವಗಳ ಪರ್ಯಾಲೋಚನೆ ಮತ್ತು ತಾಲ್ಲೂಕು ಪಂಚಾಯಿತಿಯ ಆದಾಯ ಮತ್ತು ವೆಚ್ಚ ಸಾಮಾನ್ಯ ಮೇಲ್ವಿಚಾರಣೆ ಮತ್ತು ಸಹಕಾರ, ಸಣ್ಣುಉಳಿತಾಯ ಮತ್ತು ತಾಲ್ಲೂಕಿನ ಅಭಿವೃದ್ದಿ ಯೋಜನೆಗೆ ಸಂಬಂದಿಸಿದ ಇತರ ಯಾವುದೇ ಕಾರ್ಯ ಇವುಗಳನ್ನು ನೇರವೇರಿಸತಕ್ಕದ್ದು

  3. ಸಾಮಾಜಿಕ ನ್ಯಾಯ ಸಮಿತಿ:

    ಸಾಮಾಜಿಕ ನ್ಯಾಯಸಮಿತಿಯು ಈ ಮುಂದೆ ತಿಳಿಸಿರುವ ಕಾರ್ಯಗಳನ್ನು ನೇರವೇರಸತಕ್ಕದ್ದು:

  1. ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಖತಿಕ ಮತ್ತು ಇತರ ಹಿತದೃಷ್ಟಿಯ ಸಂವರ್ಧನೆ
  2. ಸಾಮಾಜಿಕ ಅನ್ಯಾಯ ಹಾಗೂ ಎಲ್ಲಾ ಇತರ ರೀತಿಯ ಶೋಷಣೆಯಿಂದ ಅವರನ್ನು ಸಂರಕ್ಷಿಸುವುದು
  3. ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಏಳಿಗೆ, ಮತ್ತು
  4. ಅನುಸೂಚಿತ ಜಾತಿಗಳಿಗೆ, ಅನುಸೂಚಿತ ಪಂಗಡಗಳಿಗೆ , ಮಹಿಳೆಯರಿಗೆ ಮತ್ತು ಸಮಾಜದ ಇತರ ದುರ್ಬಲವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವುದು

ತಾಲೂಕು ಪಂಚಾಯತಿಯ ಪ್ರಕಾರ್ಯಗಳು:

ತಾಲ್ಲೂಕು ಪಂಚಾಯಿತಿಯು ಅನುಸೂಚಿ II ರಲ್ಲಿ ನಿರ್ಧಿಷ್ಟಪಡಿಸಲಾದ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು

ಪರಂತು ಅನುಸೂಚಿ II ರಲ್ಲಿ ನಿರ್ಧಿಷ್ಟಪಡಿಸಲಾದ ಯಾವುದೇ ಪ್ರಕಾರ್ಯವನ್ನು ನಿರ್ವಹಿಸುವುದಕ್ಕೆ ರಾಜ್ಯ ಸರ್ಕಾರ, ಅಥವಾ ಕೇಂದ್ರ ಸರ್ಕಾರವು ನಿಧಿಗಳನ್ನು ಒದಗಿಸುವಲ್ಲಿ, ತಾಲ್ಲೂಕು ಪಂಚಾಯಿತಿಯು ಅಂಥ ಪ್ರಕಾರ್ಯವನ್ನು ನಿರ್ವಹಿಸುವುದಕ್ಕಾಗಿ ವಿಧಿಸಲಾಗಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಅಂಥ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು, ಎಂದರೆ :

 

  1. ದಿನ ಒಂದಕ್ಕೆ ಪ್ರತಿ ವ್ಯಕ್ತಿಗೆ 55 ಲೀಟರ್ ಗಳಿಗೆ ಕಡಿಮೆ ಇಲ್ಲದಂತೆ ನೀರು ಪೂರೈಸುವುದಕ್ಕಾಗಿ ನೀರು ಪೂರೈಕೆ ಕಾಮಗಾರಿಗಳನ್ನು ನಿರ್ಮಿಸುವುದು ಮತ್ತು ಹೆಚ್ಚಿಸುವುದು.
  2. ತಾಲ್ಲೂಕಿನೊಳಗಿನ ಗ್ರಾಮ ಪಂಚಾಯಿತಿಯ ಕಾರ್ಯಚಟುವಟಿಕೆಗಳು, ಎಂದರೆ:
  3. ಗ್ರಾಮ ಸಭೆಯನ್ನು ನೆಡೆಸುವುದು
  4. ನೀರು ಪೂರೈಕೆ ಕಾಮಗಾರಿಗಳ ನಿರ್ವಹಣೆ
  5. ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳನ್ನು ನಿರ್ಮಿಸುವುದು
  6. ತೆರಿಗೆ, ಧರ ಮತ್ತು ಶುಲ್ಕಗಳನ್ನು ವಸೂಲು ಮಾಡುವುದು ಮತ್ತು ಅವುಗಳ ಪರಿಷ್ಕರಣೆ
  7. ವಿದ್ಯುತ್ ಶುಲ್ಕಗಳನ್ನು ಸಂದಾಯ ಮಾಡುವುದು
  8. ಶಾಲೆಗಳಿಗೆ ನೋಂದಣಿ ಪ್ರಕ್ರಿಯೆ ನಡೆಸುವುದು
  9. ರೋಗ ನಿರೋಧಕ ಚುಚ್ಚುಮುದ್ದುಗಳ ಪ್ರಗತಿ
  • ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಸುಸ್ಥತಿಯಲ್ಲಿಡುವುದು ಮತ್ತು ಸಾಕಷ್ಟು ಪಾಠಧ ಕೊಠಡಿಗಳನ್ನು ಮತ್ತು ನೀರು ಪೂರೈಕೆ ಹಾಗೂ ನಿರ್ಮಲ ವ್ಯವಸ್ಥೆಯನ್ನು ಒದಗಿಸುವುದು.
  • ಗ್ರಾಮಗಳಲ್ಲಿ ವಾಸದ ಮನೆಗಳಿಂದ ತಿಪೆಗುಂಡಿಗಳ ಸ್ಥಳಾಂತರಕ್ಕಾಗಿ ಭೂಮಿಯನ್ನು ಗುರ್ತಿಸಿ ಅರ್ಜಿಸುವುದು.