Close

ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ

ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ – ಬೆಂಗಳೂರು ಗ್ರಾಮಾಂತರ         ... - ಕರ್ನಾಟಕ ಕೌಶಲ್ಯ ಅಭಿವೃದ್ಧಿ ...

 

 

ವಿಷನ್

ರಾಜ್ಯದ ಆರ್ಥಿಕ ಬೆಳವಣಿಗೆ ಹಾಗು ಅಂತರ್ಗತ ಅಭಿವೃದ್ಧಿಗಾಗಿ ಜನಸಂಖ್ಯಾ ಲಾಭಾಂಶದ ಪ್ರಯೋಜನವನ್ನು ಪಡೆದುಕೊಳ್ಳಲು ಕೆ.ಎಸ್.ಡಿ.ಸಿ.ಯು ಜಾಗತಿಕ ಗುಣಮಟ್ಟದ, ಮಾರುಕಟ್ಟೆ ಆಧಾರಿತ, ವೃತ್ತಿಪರ ಕೌಶಲ್ಯ ತರಬೇತಿಯನ್ನು ಕರ್ನಾಟಕದ ಜನತೆಗೆ ಉದ್ಯೋಗ ಹಾಗು ಉದ್ಯಮಕ್ಕೆ ಒದಗಿಸುವ, ಪ್ರಾದೇಶಿಕ ಕೌಶಲ್ಯ ವ್ಯವಸ್ಥೆಗಳನ್ನು ಪೋಷಿಸುವ ಅತ್ಯುನ್ನತ ಸಂಸ್ಥೆಯಾಗುವ ಗುರಿಯನ್ನು ಹೊಂದಿದೆ.

ಮಿಷನ್

ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ಕರ್ನಾಟಕದ ಜನತೆಯನ್ನು ಸಿದ್ಧಗೊಳಿಸಲು ವಿಶ್ವದ ಉದ್ಯಮ, ಶೈಕ್ಷಣಿಕ ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳೊoದಿಗೆ ಕೈ ಜೋಡಿಸಿ ರಾಜ್ಯದ ಕೌಶಲ್ಯ ಕೊರತೆಯ ಅಂತರವನ್ನು ಕಡಿಮೆ ಮಾಡಲು ಅಲ್ಪಾವಧಿಯ ವೃತ್ತಿಪರ ತರಬೇತಿ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೆ.ಎಸ್.ಡಿ.ಸಿ. ಒದಗಿಸುತ್ತಿದೆ.

ಸೇವೆಗಳು ಮತ್ತು ಯೋಜನೆಗಳು

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (ಸಿ ಎಂ ಕೆ ಕೆ ವೈ)

  • ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯು (ಸಿ.ಎಂ.ಕೆ.ಕೆ.ವೈ) ಕರ್ನಾಟಕದ ಯುವಜನತೆಯ ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗಾಗಿ ಅಲ್ಪಾವಧಿಯ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಪ್ರಮುಖ ಯೋಜನೆಯಾಗಿದೆ.
  • ಈ ಯೋಜನಯಡಿಯಲ್ಲಿ ೧೮-೩೫ ವರ್ಷ ವಯಸ್ಸಿನ ಯುವಜನತೆಯು ಅಪರೆಲ್, ಲಾಜಿಸ್ಟಿಕ್ಸ್, ಬಿ.ಎಫ್.ಎಸ್.ಐ., ಐ.ಟಿ-ಐಟಿಇಎಸ್, ಆರೋಗ್ಯ, ಕೃಷಿ, ರೀಟೇಲ್, ಪ್ರವಾಸೋದ್ಯಮ ಮತ್ತು ಇತರೆ ವಲಯಗಳಲ್ಲಿನ ಸುಮಾರು ೩,೦೦೦ ಎನ್.ಎಸ್.ಕ್ಯೂ.ಎಫ್. ಜಾಬ್ ರೋಲ್‌ಗಳಲ್ಲಿ ಉಚಿತ ಕೌಶಲ್ಯ ತರಬೇತಿಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
  • ರಾಜ್ಯಾದ್ಯಂತ ಸುಮಾರು ೮೦೦ ಮಾನ್ಯತೆ ಪಡೆದ ಸಿ.ಎಂ.ಕೆ.ಕೆ.ವೈ. ಕೇಂದ್ರಗಳಲ್ಲಿ ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದೆ. ಇದುವರೆಗೆ, ೧,೩೫,೨೬೩ ಅಭ್ಯರ್ಥಿಗಳಿಗೆ ಈ ಯೋಜನೆಯಡಿ ತರಬೇತಿ ನೀಡಲಾಗಿದೆ.
  • ತರಬೇತಿಯ ನಂತರ ಮೌಲ್ಯಮಾಪನ ನಡೆಸಿ ಅಭ್ಯರ್ಥಿಗಳನ್ನು ಪ್ರಮಾಣೀಕರಿಸಲಾಗುತ್ತಿದೆ. ಕೆ.ಎಸ್.ಡಿ.ಸಿ.ಯು ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳಿಗೆ ತರಬೇತಿಯ ನಂತರ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ.
  • ಕಳೆದ ವರ್ಷ (2022 – 2023) ಕ್ಷೇತ್ರವಾರು ತರಬೇತಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ (ಪಿ ಎಂ ಕೆ ವಿ ವೈ)

  • ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯು (ಪಿ.ಎಂ.ಕೆ.ವಿ.ವೈ.) ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ  ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.
  • ಈ ಕೌಶಲ್ಯ ಪ್ರಮಾಣೀಕರಿಸುವ ಯೋಜನೆಯ ಉದ್ದೇಶವು ಭಾರತದ ಯುವಜನತೆಗೆ, ಉದ್ಯೋಗಕ್ಕೆ ಸೂಕ್ತವಾದ ಕೌಶಲ್ಯ ತರಬೇತಿ ನೀಡಿ, ಅವರು ಉತ್ತಮ ಜೀವನೋಪಾಯ ಗಳಿಸುವಲ್ಲಿ ಬೆಂಬಲಿಸುವುದಾಗಿದೆ. ಅನುಭವಿ ಅಥವಾ ಕುಶಲ ಅಭ್ಯರ್ಥಿಗಳಿಗೆ ಹಿಂದಿನ ಕಲಿಕೆಯ ಗುರುತಿಸುವಿಕೆ (ಆರ್.ಪಿ.ಎಲ್.) ಇದರ ಮೂಲಕ ಮೌಲ್ಯಮಾಪನ ಮಾಡಿ ಪ್ರಮಾಣೀಕರಿಸುವ ಅವಕಾಶವನ್ನು ಈ ಯೋಜನೆಯು ಒದಗಿಸಿದೆ. ಕರ್ನಾಟಕದಲ್ಲಿ ೫,೫೦೦ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಆರ್.ಪಿ.ಎಲ್.ನ ಮೂಲಕ ಪ್ರಮಾಣೀಕರಿಸಲಾಗಿದೆ.
  • ಪಿ.ಎಂ.ಕೆ.ವಿ.ವೈ ಯೋಜನೆಯಡಿಯಲ್ಲಿ ನಡೆಸಲಾದ ಕೋವಿಡ್ ವಾರಿಯರ್ಸ್ ಕಾರ್ಯಕ್ರಮದ ಮೂಲಕ ಕರ್ನಾಟಕದಲ್ಲಿ ೧೧,೦೦೦ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಜೆನೆರಲ್ ಡ್ಯೂಟಿ ಅಸಿಸ್‌ಟೆಂಟ್, ಹೋಂಮ್ ಹೆಲ್ತ್ ಏಡ್, ಪ್ಲೆಬೋಟಮಿಸ್ಟ್ ಮುಂತಾದ ಜಾಬ್ ರೋಲ್‌ಗಳಲ್ಲಿ ತರಬೇತಿ ನೀಡಲಾಗಿದೆ. ಅಭ್ಯರ್ಥಿಗಳಿಗೆ ತರಬೇತಿಯ ನಂತರ ರಾಜ್ಯದ ಪ್ರಮುಖ ಆರೋಗ್ಯ ಚಿಕಿತ್ಸಾ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ನೀಡಲಾಗಿದೆ.

ಅಂತರರಾಷ್ರೀಯ ವಲಸೆ ಕೇಂದ್ರ – ಕರ್ನಾಟಕ

  • IMC-K ಮೂಲಕ, KSDC ಸಾಗರೋತ್ತರ ಉದ್ಯೋಗದಾತರೊಂದಿಗೆ ಆಕಾಂಕ್ಷಿಗಳನ್ನು ಸಂಪರ್ಕಿಸುತ್ತದೆ ಮತ್ತು ಅವರ ಸುರಕ್ಷಿತ ವಲಸೆಯನ್ನು ಸುಗಮಗೊಳಿಸುತ್ತದೆ. ಈ ಉಪಕ್ರಮದ ಅಡಿಯಲ್ಲಿ ಇದುವರೆಗೆ 280 ಅಭ್ಯರ್ಥಿಗಳು ವಿದೇಶದಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.
  • IMC-K ಕರ್ನಾಟಕದಲ್ಲಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಯಿಂದ ಅಧಿಕೃತಗೊಂಡಿರುವ ಏಕೈಕ ನಿರ್ಗಮನ ಪೂರ್ವ ದೃಷ್ಟಿಕೋನ ತರಬೇತಿ ಕೇಂದ್ರವಾಗಿದೆ. IMC-K ನಲ್ಲಿನ ಮಾಸ್ಟರ್ ತರಬೇತುದಾರರು MEA ಯಿಂದ ಪ್ರಮಾಣೀಕರಿಸಲ್ಪಟ್ಟಿದ್ದಾರೆ. ನಿರ್ಗಮನದ ಪೂರ್ವ ದೃಷ್ಟಿಕೋನವನ್ನು ಕೇಂದ್ರದಲ್ಲಿ 5 ಭಾಷೆಗಳಲ್ಲಿ ನೀಡಲಾಗುತ್ತದೆ. ಆಕಾಂಕ್ಷಿಗಳ ಉಲ್ಲೇಖಕ್ಕಾಗಿ ವಲಸೆ ಟೂಲ್ ಕಿಟ್ ಅನ್ನು ಸಹ ಒದಗಿಸಲಾಗಿದೆ.
  • IMC-K ವಿದೇಶದಲ್ಲಿ ಉದ್ಯೋಗಾವಕಾಶಗಳನ್ನು ಗುರುತಿಸಲು ಮತ್ತು ಕರ್ನಾಟಕದ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಮೌಲ್ಯಮಾಪನದಲ್ಲಿ ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲು ವಿದೇಶಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ.
  • ಈ ಉಪಕ್ರಮದ ಅಡಿಯಲ್ಲಿ, ಅಂತಹ ಕೌಶಲ್ಯ ತರಬೇತಿಯನ್ನು ಪಡೆದ ಮತ್ತು ಮೌಲ್ಯಮಾಪನದಲ್ಲಿ ಉತ್ತೀರ್ಣರಾದ ಕರ್ನಾಟಕದ ದಾದಿಯರನ್ನು ಉದ್ಯೋಗಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ನಿಯೋಜಿಸಲಾಯಿತು. ಅದೇ ರೀತಿ ಕುವೈತ್‌ಗೆ ಮನೆಕೆಲಸ ಮಾಡುವವರ ವಲಸೆಗೂ ಅನುಕೂಲ ಕಲ್ಪಿಸಲಾಗಿತ್ತು.
  • ಇಟಲಿ, ಜಪಾನ್, ಓಮನ್ ಮತ್ತು ಬಹ್ರೇನ್‌ನ ಸಂಸ್ಥೆಗಳು ಕರ್ನಾಟಕದಿಂದ ಆತಿಥ್ಯ, ಕೃಷಿ ಮತ್ತು ಐಟಿ ಕ್ಷೇತ್ರಗಳಲ್ಲಿ ನುರಿತ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಆಸಕ್ತಿ ತೋರಿಸಿವೆ.

ಎಲ್ ಸಿಕೈಗಾರಿಕಾ ಸಂಪರ್ಕ ಕೇಂದ್ರ

  • ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಗಳಲ್ಲಿ ಕೈಗಾರಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕುಶಲ ಉದ್ಯೋಗಿಗಳ ಪೂರೈಕೆ ಹಾಗು ಬೇಡಿಕೆಯ ಅಂತರವನ್ನು ಅಂದರೆ ಕೌಶಲ್ಯ ಕೊರತೆಯ ಅಂತರವನ್ನು ಕಡಿಮೆ ಮಾಡುವಲ್ಲಿ ಕೈಗಾರಿಕೆಗಳೊಂದಿಗೆ ಕೈಜೋಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ, ಕೆ.ಎಸ್.ಡಿ.ಸಿ.ಯು ಕೈಗಾರಿಕಾ ಸಂಪರ್ಕ ಕೋಶವನ್ನು(ಐ.ಎಲ್.ಸಿ.) ರಚಿಸಿದ್ದು, ಇದು ಕರ್ನಾಟಕದ ಮುಖ್ಯ ಕೈಗಾರಿಕಾ ವಲಯಗಳ ಕೌಶಲ್ಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಹಕಾರಿಯಾಗಲಿದೆ.

     

  • ಇದಕ್ಕಾಗಿ ಇಂಡಸ್ಟಿç ಕಾನ್‌ಕ್ಲೇವ್‌ಗಳನ್ನು ಆಯೋಜಿಸಿ, ಉದ್ಯೋಗ ಮಾರುಕಟ್ಟೆಗಳ ಪ್ರಸ್ತುತ ಹಾಗು ಭವಿಷ್ಯದ ಬೇಡಿಕೆಗಳನ್ನು ಗುರುತಿಸಿ. ಸೂಕ್ತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಇದು ಸಹಕಾರಿಯಾಗಿದೆ.
  • ಕೈಗಾರಿಕೆಗಳು ಸಿ.ಎಂ.ಕೆ.ಕೆ.ವೈ. ತರಬೇತಿ ಕೇಂದ್ರಗಳಾಗಿ ಕೆ.ಎಸ್.ಡಿ.ಸಿ.ಯಿಂದ ಮಾನ್ಯತೆ ಪಡೆದು ಅಲ್ಪಾವಧಿಯ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವ ವ್ಯವಸ್ಥೆಯನ್ನು ಐ.ಎಲ್.ಸಿ. ಸುಗಮಗೊಳಿಸಿದೆ. ವಿಪ್ರೊ ಜಿ.ಇ. ಹೆಲ್ತ್ಕೇರ್, ಇ.ಕಾಂ. ಎಕ್ಸ್ಪ್ರೆಸ್, ಎಲ್ಸಿಯಾ ಮುಂತಾದ ಕೈಗಾರಿಕೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಕೆ.ಎಸ್.ಡಿ.ಸಿ.ಯೊಂದಿಗೆ ಈ ನಿಟ್ಟಿನಲ್ಲಿ ಕೈಜೋಡಿಸಿವೆ.

ಸಂಕಲ್ಪ್ಇತರ ವಿಶೇಷ ಯೋಜನೆಗಳು

         ವಿಶ್ವ ಬ್ಯಾಂಕ್‌ನ ಬೆಂಬಲದೊAದಿಗೆ, ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಸಂಕಲ್ಪ್ ಯೋಜನೆಯನ್ನು ಸಾಂಸ್ಥಿಕ ಸಾಮರ್ಥವನ್ನು ಹೆಚ್ಚಿಸಲು, ಅಲ್ಪಾವಧಿಯ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಗುಣಮಟ್ಟ ಹೆಚ್ಚಿಸಲು, ಅವುಗಳನ್ನು ಮಾರುಕಟ್ಟೆಯ ಬೇಡಿಕೆ ಅನುಗುಣವಾಗಿ ರೂಪಿಸಲು ಹಾಗು ಅಂತರ್ಗತ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ಜಾರಿಗೆ ತರಲಾಗಿದೆ.

  • ಆಯ್ಕೆಯಾದಯಾದಗಿರಿ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಐದು ಭಾಷಾ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಭಾಷಾ ತರಬೇತಿಯ ಯೋಜನೆ ಅನುಷ್ಠಾನ ಪ್ರಗತಿಯಲ್ಲಿದೆ. ಈಗಾಗಲೇ ೪ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದ್ದು, ಇಂಗ್ಲೀಷ್ ಭಾಷೆಯ ತರಬೇತಿಯನ್ನು ಪ್ರಾರಂಭಿಸಲಾಗಿದೆ.
  • ಮ್ಯಾಕ್‌ಮಿಲನ್ಪಬ್ಲಿಷರ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ೫೦೦ ತರಬೇತುದಾರರ ತರಬೇತಿ ನೀಡಲಾಗುತ್ತಿದೆ.
  • ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಉತ್ತರಕನ್ನಡ, ಚಾಮರಾಜನಗರ, ಕೋಲಾರ, ಕೊಪ್ಪಳ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ೫೦೦ ತರಬೇತುದಾರರಿಗೆ ತರಬೇತಿ ನೀಡಲಾಗುತ್ತಿದೆ.
  • ಕೌಶಲ್ಯ ರಥ ಅಥವಾ ಸ್ಕಿಲ್ ಆನ್ ವೀಲ್ಸ್– ರಾಜ್ಯದ ಗ್ರಾಮೀಣ ಯುವಜನತೆಯ ಕೌಶಲ್ಯ ವೃದ್ಧಿಸಲು ವಿಶ್ವಬ್ಯಾಂಕ್‌ನ ಬೆಂಬಲದೊoದಿಗೆ ಕೆ.ಎಸ್.ಡಿ.ಸಿಯು ಅನುಷ್ಠಾನಗೊಳಿಸುತ್ತಿರುವ ವಿಶೇಷ ಕಾರ್ಯಕ್ರಮವಾಗಿದೆ. ತರಬೇತುದಾರರೊಂದಿಗೆ ತರಬೇತಿಗೆ ಅವಶ್ಯಕವಾದ ಸಾಧನಗಳನ್ನು ಒಳಗೊಂಡ ಬಸ್‌ಗಳು ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಸಂಚರಿಸುತ್ತಿವೆ.

ತರಬೇತಿಯನ್ನು ಗ್ರಾಮೀಣ ಯುವಜನತೆಗೆ, ವಿಕಲಚೇತನರಿಗೆ, ಗ್ರಾಮೀಣ ಮಹಿಳೆಯರಿಗೆ ಈ ಮೊಬೈಲ್ ತರಬೇತಿ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ. ಮೊದಲನೇಯ ಹಂತದಲ್ಲಿ ರಾಯಚೂರು ಹಾಗು ಬೀದರ್ ಜಿಲ್ಲೆಗಳಲ್ಲಿ ವಿದ್ಯುತ್ಕಾರ್ಮಿಕ ತರಬೇತಿಯನ್ನು ಹಾಗು ಯಾದಗಿರಿ ಹಾಗು ಹಾವೇರಿ ಜಿಲ್ಲೆಗಳಲ್ಲಿ ಬ್ಯೂಟಿ ಥೆರಪಿಸ್ಟ್ ತರಬೇತಿಯನ್ನು ನೀಡಲಾಗುತ್ತಿದೆ. ೧೮-೩೫ ವರ್ಷ ವಯಸ್ಸಿನ ೮ನೇ ತರಗತಿ ಉತ್ತೀರ್ಣರಾದ ಯುವಕರು ಅಥವಾ ಯುವತಿಯರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬಹುದು.

 

ಅಂತರರಾಷ್ರೀಯ ವಲಸೆ ಕೇಂದ್ರ – ಕರ್ನಾಟಕ

  • IMC-K ಮೂಲಕ, KSDC ಸಾಗರೋತ್ತರ ಉದ್ಯೋಗದಾತರೊಂದಿಗೆ ಆಕಾಂಕ್ಷಿಗಳನ್ನು ಸಂಪರ್ಕಿಸುತ್ತದೆ ಮತ್ತು ಅವರ ಸುರಕ್ಷಿತ ವಲಸೆಯನ್ನು ಸುಗಮಗೊಳಿಸುತ್ತದೆ. ಈ ಉಪಕ್ರಮದ ಅಡಿಯಲ್ಲಿ ಇದುವರೆಗೆ 280 ಅಭ್ಯರ್ಥಿಗಳು ವಿದೇಶದಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.
  • IMC-K ಕರ್ನಾಟಕದಲ್ಲಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಯಿಂದ ಅಧಿಕೃತಗೊಂಡಿರುವ ಏಕೈಕ ನಿರ್ಗಮನ ಪೂರ್ವ ದೃಷ್ಟಿಕೋನ ತರಬೇತಿ ಕೇಂದ್ರವಾಗಿದೆ. IMC-K ನಲ್ಲಿನ ಮಾಸ್ಟರ್ ತರಬೇತುದಾರರು MEA ಯಿಂದ ಪ್ರಮಾಣೀಕರಿಸಲ್ಪಟ್ಟಿದ್ದಾರೆ. ನಿರ್ಗಮನದ ಪೂರ್ವ ದೃಷ್ಟಿಕೋನವನ್ನು ಕೇಂದ್ರದಲ್ಲಿ 5 ಭಾಷೆಗಳಲ್ಲಿ ನೀಡಲಾಗುತ್ತದೆ. ಆಕಾಂಕ್ಷಿಗಳ ಉಲ್ಲೇಖಕ್ಕಾಗಿ ವಲಸೆ ಟೂಲ್ ಕಿಟ್ ಅನ್ನು ಸಹ ಒದಗಿಸಲಾಗಿದೆ.
  • IMC-K ವಿದೇಶದಲ್ಲಿ ಉದ್ಯೋಗಾವಕಾಶಗಳನ್ನು ಗುರುತಿಸಲು ಮತ್ತು ಕರ್ನಾಟಕದ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಮೌಲ್ಯಮಾಪನದಲ್ಲಿ ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲು ವಿದೇಶಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ.
  • ಈ ಉಪಕ್ರಮದ ಅಡಿಯಲ್ಲಿ, ಅಂತಹ ಕೌಶಲ್ಯ ತರಬೇತಿಯನ್ನು ಪಡೆದ ಮತ್ತು ಮೌಲ್ಯಮಾಪನದಲ್ಲಿ ಉತ್ತೀರ್ಣರಾದ ಕರ್ನಾಟಕದ ದಾದಿಯರನ್ನು ಉದ್ಯೋಗಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ನಿಯೋಜಿಸಲಾಯಿತು. ಅದೇ ರೀತಿ ಕುವೈತ್‌ಗೆ ಮನೆಕೆಲಸ ಮಾಡುವವರ ವಲಸೆಗೂ ಅನುಕೂಲ ಕಲ್ಪಿಸಲಾಗಿತ್ತು.

https://kaushalkar.karnataka.gov.in