ಆವತಿ ಕೆರೆ
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲುಕಿನ ಆವತಿ ಗ್ರಾಮದಲ್ಲಿ ಆವತಿ ಕೆರೆಯು ಪ್ರಶಾಂತವಾದ ನೀರಿನ ಮೂಲವಾಗಿದೆ. ಹಚ್ಚ ಹಸಿರಿನಿಂದ ಮತ್ತು ಕಲ್ಲಿನ ಭೂದೃಶ್ಯಗಳಿಂದ ಸುತ್ತುವರೆದಿರುವ ಈ ಕೆರೆಯು ಸ್ಥಳೀಯರು ಮತ್ತು ಸಂದರ್ಶಕರಿಗೆ ನೈಸರ್ಗಿಕ ತಾಣವಾಗಿದೆ. ಆವತಿ ಕರೆಯು ಪಕ್ಷಿಗಳು ಮತ್ತು ಜಲಚರಗಳಿಗೆ ಆವಾಸಸ್ಥಾನವಾಗಿದ್ದು, ಪ್ರಕೃತಿ ಪ್ರಿಯರು ಮತ್ತು ಛಾಯಾಗ್ರಾಹಕರಿಗೆ ಶಾಂತಿಯುತ ಸ್ಥಳವಾಗಿದೆ. ಅವತಿ ಬೆಟ್ಟ ಮತ್ತು ಶ್ರೀ ತಿಮ್ಮರಾಯ ಸ್ವಾಮಿ ದೇವಾಲಯಕ್ಕೆ ಹತ್ತಿರದಲ್ಲಿದೆ.