ಆವತಿ ಬೆಟ್ಟ
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲುಕಿನ ಆವತಿ ಬೆಟ್ಟವು ಪ್ರಾಕೃತಿಕ ಪ್ರಾಮುಖ್ಯತೆ ಹೊಂದಿದ್ದು, ನಾಡಪ್ರಭು ಕೆಂಪೇಗೌಡರ ಪೂರ್ವಜರು ಹದಿನಾಲ್ಕನೇ ಶತಮಾನದ ಅಂತ್ಯದಲ್ಲಿ ವಲಸೆ ಬಂದ ರಣಭೈರೇಗೌಡ ಮತ್ತವರ ಸೋದರರು ಈ ಬೆಟ್ಟದ ತಪ್ಪಲಲ್ಲಿಯೇ ನೆಲೆಸಿರುತ್ತಾರೆ ಎಂಬ ಇತಿಹಾಸವಿದೆ. ಅವತಿ ಬೆಟ್ಟವು ಚಾರಣಿಗರು, ಬೈಕ್ ಸವಾರರು, ಪ್ರಕೃತಿ ಉತ್ಸಾಹಿಗಳಿಗೆ ಮತ್ತು ಛಾಯಾಗ್ರಾಹಕ ಪ್ರವಾಸಿಗರಿಗೆ ಬೇಟಿ ನೀಡಲು ಸೂಕ್ತ ಸ್ಥಳವಾಗಿದೆ.