ತಿಮ್ಮರಾಯ ಸ್ವಾಮಿ ದೇವಸ್ಥಾನ
ವರ್ಗ ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲುಕಿನ ಶ್ರೀ ತಿಮ್ಮರಾಯ ಸ್ವಾಮಿ ದೇವಸ್ಥಾನವು, ತಿರುಮಲೆಯಂತೆಯೇ ನಂದಿ ಕ್ಷೇತ್ರದ ಸಪ್ತಗಿರಿಗಳಲ್ಲಿ (ದಿವ್ಯಗಿರಿ, ಬ್ರಹ್ಮಗಿರಿ, ನಂದಿಗಿರಿ, ವಿಷ್ಣುಗಿರಿ, ಸ್ಕಂದಗಿರಿ, ಗೌತಮಗಿರಿ, ಕುಕ್ಕುಟಗಿರಿ) ಒಂದಾದ ಗೌತಮಗಿರಿ. ಈ ದೇವಾಲಯದ ದಂತಕಥೆಯ ಪ್ರಕಾರ ಸಂತ “ಶ್ರೀ ಗೌತಮ ಮಹರ್ಷಿ” ಈ “ಚತುರ್ಬುಜ ಶಂಕ ಚಕ್ರ ಗದಾದಾರಿ ಶ್ರೀ ಲಕ್ಷ್ಮಿ ತಿಮ್ಮರಾಯಸ್ವಾಮಿ”ಯನ್ನು ಸ್ಥಾಪಿಸಿದ್ದಾರೆ. ಈ ದೇವಾಲಯ ಇರುವ ಬೆಟ್ಟವನ್ನು “ಗೌತಮ ಗಿರಿ” ಎಂದೂ ಕರೆಯಲಾಗುತ್ತದೆ. ಅಲ್ಲದೆ, ದೇವಾಲಯದ ಹಿಂದೆ ಒಂದು ಗುಹೆ ಇದ್ದು, ಇದು ಸಂತ “ಶ್ರೀ ಗೌತಮ ಮಹರ್ಷಿ” ತಂಗಿದ್ದ ಗುಹೆ ಎಂದು ನಂಬಲಾಗಿದೆ.