ವಿಪತ್ತು ನಿರ್ವಹಣೆ ಯಾಂತ್ರಿಕ ವ್ಯವಸ್ಥೆ
ರಾಷ್ಟ್ರೀಯ ರಾಜ್ಯ ಮತ್ತು ಜಿಲ್ಲೆಗಳ ಹಂತಗಳಲ್ಲಿ ವಿಕೋಪ ನಿರ್ವಹಣೆಯನ್ನು ಪರಿಣಾಮಕಾರಿ ಗೊಳಿಸಲು, ಡಿಸೆಂಬರ್ 23, 2005 ರಂದು ವಿಕೋಪ ನಿರ್ವಹಣಾ ಕಾಯ್ದೆ ಜಾರಿಗೆ ಬಂದಿದೆ. ಇದರ ಮೂಲ ಉದ್ದೇಶ ಪರಿಣಾಮಕಾರಿಯಾಗಿ ಮಾನವ ನಿರ್ಮಿತ ಮತ್ತು ನೈಸರ್ಗಿಕವಾಗಿ ಸಂಭವಿಸ ಬಹುದಾದದ ವಿಕೋಪಗಳನ್ನು ನಿರ್ವಹಿಸುವುದಾಗಿದೆ ಹಾಗೂ ಇಲ್ಲಿಯವರೆಗೆ ಪರಿಹಾರ ಕೇಂದ್ರಿತ ವಿಧಾನದಿಂದ ಪೂರ್ವ ಯೋಜಿತ ಸುಧಾರಣೆಗಳೊಂದಿಗೆ ವಿಕೋಪ ನಿರ್ವಹಣೆಯನ್ನು ಬಲಪಡಿಸುವುದಕ್ಕಾಗಿ ಇರುವ ವ್ಯವಸ್ಥೆ. ಈ ಅಧಿನಿಯಮದ ಆದೇಶದಂತೆ ಭಾರತ ಸರ್ಕಾರವು ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ಬಹುಶ್ರೇಣಿಕೃತ ಸಾಂಸ್ಥಿಕ ವ್ಯವಸ್ಥೆಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMAs) ರಾಷ್ಟ್ರೀಯ ಮಟ್ಟದಲ್ಲಿ, ಮುಖ್ಯ ಮಂತ್ರಿ ನೇತೃತ್ವದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMAs) ಹಾಗೂ ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಸ್ಥಳೀಯ ಅಧಿಕಾರಿಗಳ ಚುನಾಯಿತ ಪ್ರತಿನಿಧಿಗಳ ಸಹಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (DDMAs) ರಚಿಸಲಾಗಿದೆ (NDMA Guidelines).
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ( DDMA)
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಗ್ರ, ಪೂರ್ವ ಯೋಜಿತ ಮತ್ತು ತಂತ್ರಾಜ್ಞಾನ ಚಾಲಿತ ಕಾರ್ಯತಂತ್ರಗಳಿಂದ ಸಂಭವಿಸಬಹುದಾದ ಅಪಾಯ, ನಷ್ಟ, ಗಂಡಾಂತರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಹಾಗೂ ವಿಕೋಪ ಸಂಭವಿಸುವ ನಿರೀಕ್ಷೆಯ ಮೇರೆಗೆ ಕೈಗೊಳ್ಳುವ ಯೋಜನೆ ಕಾರ್ಯರೂಪ ಮತ್ತು ಪರಿಹಾರ ಕಾರ್ಯಚರಣೆಯನ್ನು ಯಶ್ವಸಿಯಾಗಿ ಕೈಗೊಳ್ಳುವ ಪ್ರಾಧಿಕಾರವಾಗಿದೆ. ಇಡೀ ಪ್ರಕ್ರಿಯೆಯು ಸಮುದಾಯವನ್ನು ಕೇಂದ್ರವಾಗಿರುಸುತ್ತದೆ. ಮತ್ತು ಎಲ್ಲಾ ಸರ್ಕಾರಿ ಇಲಾಖೆಗಳ, ಸೇವದಳಗಳ ಸಮೂಹ ಸ್ವಯಂ ಸೇವಕರು ಹಾಗೂ ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳ ಸಮನ್ವಯದೊಂದಿಗೆ ಸಮೂಹಿಕ ಪ್ರಯತ್ನಗಳ ಮೂಲಕ ವಿಕೋಪಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಇಲಾಖೆಯಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (DDMA) ಗುರಿ ಮತ್ತು ಉದ್ದೇಶಗಳು:
ಯೋಜನೆ, ಸನ್ನದ್ದತೆ, ಕಾರ್ಯಚರಣೆ, ಸಮನ್ವಯ ಮತ್ತು ಸಮುದಾಯದ ಭಾಗವಹಿಸುವಿಕೆಯಿಂದ ವಿಪತ್ತು ನಿರ್ವಹಣೆಯ ಎಲ್ಲಾ ಘಟಕಗಳನ್ನು ಬಲಪಡಿಸುವುದು ಮುಖ್ಯ ಗುರಿಯಾಗಿದೆ. ಈ ಇಲಾಖೆಯ ಕಾರ್ಯಾಚರಣೆ, ಆಡಳಿತ, ಹಣಕಾಸು, ಕಾನೂನು ಅಂಶಗಳು ಮತ್ತು ಪ್ರಕ್ರಿಯೆ ಮೇಲ್ವಿಚಾರಣೆ ಮಾಡುವ ನಿಯಮಗಳ ಚೌಕಟ್ಟುಗಳನ್ನು ಹೊಂದಿದೆ.
ಅಂತೆಯೇ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉದ್ದೇಶಗಳು ಈ ಕೆಳಕಂಡಂತಿವೆ:
-
-
- ವಿಪತ್ತುಗಳಿಗೆ ಸಂಬಂಧಪಟ್ಟ ವಿವಿಧ ಸ್ವರೂಪಗಳಿಗೆ ವಿಕೋಪ ದುರ್ಬಲವಾದ ಪ್ರದೇಶಗಳನ್ನು ಗುರುತಿಸುವುದು ಮತ್ತು ಅಪಾಯ ತಡೆಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಕ್ರಿಯಾ ಯೋಜನೆಯನ್ನು ಅಭಿವೃದ್ಧಿ ಪಡಿಸುವುದು.
- ಯಾವುದೇ ಅಪಾಯಕಾರಿ ವಿಪತ್ತು ಪರಿಸ್ಥಿತಿ ಅಥವಾ ವಿಕೋಪಗಳಿಗೆ ಸ್ಪಂದಿಸಲು, ವಿಪತ್ತುಗಳ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆಗೆ ಕ್ರಮ ತೆಗೆದುಕೊಳ್ಳುವುದು.
- ಜಿಲ್ಲಾ ಮಟ್ಟದಲ್ಲಿ ಮತ್ತು ಜಿಲ್ಲೆಯ ಸ್ಥಳೀಯ ಅಧಿಕಾರಿಗಳು ಯಾವುದೇ ಅಪಾಯಕಾರಿ ವಿಪತ್ತು ಪರಿಸ್ಥಿತಿ ಅಥವಾ ವಿಕೋಪಕ್ಕೆ ಪ್ರತಿಕ್ರಯಿಸಲು ಅಗತ್ಯವಿರುವ ಸಂಪನ್ಮೂಲ ಸಾಮಥ್ರ್ಯದ ಅಭಿವೃದ್ಧಿ ಪಡಿಸುವುದು ಮತ್ತು ಕಾರ್ಯವಿಧಾನಗಳನ್ನು ತಯಾರಿಸುವುದು.
- ದುರಂತದ ಸಂದರ್ಭದಲ್ಲಿ ಪ್ರತಿಕ್ರಿಯಾ ಯೋಜನೆಗಳನ್ನು ಮತ್ತು ಕಾರ್ಯವಿಧಾನವನ್ನು ತಯಾರಿಸಲು
- ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಇಲಾಖೆಗಳಿಗೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಜವಬ್ದಾರಿ ಹಂಚಿಕೆ ಮಾಡುವುದು
- ವಿಪತ್ತು ಮತ್ತು ಅದರ ಪರಿಹಾರಕ್ಕೆ ಉತ್ತೇಜನ ನೀಡಿ
- ಅಗತ್ಯ ಸಂಪನ್ಮೂಲಗಳ ಸಂಗ್ರಹಣೆ:
- ಸಂವಹನ ಕೊಂಡಿಗಳನ್ನು ಸ್ಥಾಪಿಸುವುದು: ಮತ್ತು
- ಸಾರ್ವಜನಿಕರಿಗೆ ಮಾಹಿತಿಯನ್ನು ಪ್ರಸಾರ ಮಾಡುವುದು
- ರಾಜ್ಯ ಪ್ರಾಧಿಕಾರದಿಂದ ಅಗತ್ಯವಿರುವ ಇತರೆ ವಿಷಯಗಳು.
- ರಾಷ್ಟ್ರೀಯ ಪ್ರಾಧಿಕಾರ ಮತ್ತು ರಾಜ್ಯ ಪ್ರಾಧಿಕಾರವು ನಿಗದಿಪಡಿಸಿದಂತೆ ವಿಪತ್ತು ತಡೆಗಟ್ಟುವಿಕೆ, ಅದರ ಪರಿಣಾಮಗಳ ಸನ್ನದ್ಧತೆ ಮತ್ತು ಪ್ರತಿಕ್ರಿಯೆ ಕ್ರಮಗಳನ್ನು ತಗ್ಗಿಸುವ ಮಾರ್ಗಸೂಚಿಗಳನ್ನು ಜಿಲ್ಲಾಮಟ್ಟದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಜಿಲ್ಲೆಯ ಸ್ಥಳೀಯ ಅಧಿಕಾರಿಗಳು ಅನುಸರಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು.
-
ಸಹಾಯವಾಣಿ-1077
ಕ್ರಮ. ಸಂಖ್ಯೆ . | ಹೆಸರು | ಪದನಾಮ | ಕಛೇರಿಯ ವಿಳಾಸ | ಮೊಬೈಲ್ ಸಂಖ್ಯೆ/ದೂರವಾಣಿ | ಈಮೇಲ್ |
---|---|---|---|---|---|
1 | – | ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ | ಅಧ್ಯಕ್ಷರು | 22867221 | deo[dot]bangalorer3[at]gmail[dot]com |
2 | – | ಅಧ್ಯಕ್ಷರು,ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಬೆಂಗಳೂರು | ಸಹ ಅಧ್ಯಕ್ಷರು | 22257001 | adhyakshabrzp[at]gmail[dot]com |
3 | – | ಪೊಲೀಸ್ ಅಧೀಕ್ಷಕರು,ಬೆಂಗಳೂರು ಗ್ರಾಮಾಂತರ ಜಿಲ್ಲೆ,ಬೆಂಗಳೂರು | ಸದಸ್ಯರು | 22264350 | spbng[at]ksp[dot]gov[dot]in |
4 | – | ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ,ಬೆಂಗಳೂರು | ಸದಸ್ಯರು | 22260796 | ceo_zp_brur[at]nic[dot]in |
5 | – | ಜಂಟಿ ಕೃಷಿ ನಿರ್ದೇಶಕರು,ಬೆಂಗಳೂರು ಗ್ರಾಮಾಂತರ ಜಿಲ್ಲೆ,ಬೆಂಗಳೂರು | ಸದಸ್ಯರು | 26711594 | jdablr14[at]gmail[dot]com |
6 | – | ಅಪರ ಜಿಲ್ಲಾಧಿಕಾರಿ ,ಬೆಂಗಳೂರು ಗ್ರಾಮಾಂತರ ಜಿಲ್ಲೆ,ಬೆಂಗಳೂರು | ಪ್ರಾಧಿಕಾರದ ಮುಖ್ಯಕಾರ್ಯ ನಿರ್ವಹಣಾಧಿಕಾರಿ | 26711594 | jdablr14[at]gmail[dot]com |
7 | – | ಯೋಜನಾ ನಿರ್ದೇಶಕರು,ಜಿಲ್ಲಾ ನಗರಾಭಿವೃದ್ದಿಕೋಶ, ಬೆಂಗಳೂರು ಗ್ರಾಮಾಂತರ ಜಿಲ್ಲೆ,ಬೆಂಗಳೂರು | ಸದಸ್ಯರು | 25270078 | dudc_blr[at]yahoo[dot]co[dot]in |
ಜಿಲ್ಲಾ ವಿಕೋಪ ನಿರ್ವಾಹಣಾ ತಜ್ಞೆ
ಕ್ರಮ. ಸಂಖ್ಯೆ . | ಹೆಸರು | ಪದನಾಮ | ಕಛೇರಿಯ ವಿಳಾಸ | ಮೊಬೈಲ್ ಸಂಖ್ಯೆ/ದೂರವಾಣಿ | ಈಮೇಲ್ |
---|---|---|---|---|---|
1 | ಬಸವರಾಜು.ವಿ | ಜಿಲ್ಲಾ ವಿಕೋಪ ನಿರ್ವಾಹಣಾ ತಜ್ಞ, | ಜಿಲ್ಹಾಧಿಕಾರಿಗಳ ಕಛೇರಿ ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು. |
080-22867221(F) 080-22867007 9141472886 |
deo[dot]bangalorer3[at]gmail[dot]com |