ಮೀನುಗಾರಿಕೆ ಇಲಾಖೆ
ಕರ್ನಾಟಕ ರಾಜ್ಯವು 320 ಕಿ.ಮೀ. ಉದ್ಧದ ಕರಾವಳಿ ತೀರದೊಂದಿಗೆ 27,000 ಚ.ಕಿ.ಮೀ. ಖಂಡಾವರಣ ಪ್ರದೇಶ ಮತ್ತು 5.65 ಲಕ್ಷ ಹೆಕ್ಟೇರಿನಷ್ಟು ವಿವಿಧ ಒಳನಾಡು ಜಲಸಂಪನ್ಮೂಲಗಳನ್ನು ಹೊಂದಿದ್ದು ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶ ಇರುತ್ತದೆ. ಜೊತೆಗೆ 8,000 ಹೆ. ನಷ್ಟು ಹಿನ್ನೀರು ಪ್ರದೇಶವು ಸೀಗಡಿ/ಮೀನು ಕೃಷಿಗೆ ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ. ರಾಜ್ಯದಲ್ಲಿ ಸುಮಾರು 9.61 ಲಕ್ಷ ಮೀನುಗಾರರಿದ್ದು, ಕರಾವಳಿಯಲ್ಲಿ 3.28 ಲಕ್ಷ ಹಾಗೂ ಒಳನಾಡಿನಲ್ಲಿ 6.33 ಲಕ್ಷ ಮೀನುಗಾರರು ವಿವಿಧ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ರಾಜ್ಯದ 2017-18ನೇ ಸಾಲಿನ ಒಟ್ಟು ಮೀನು ಉತ್ಪಾದನೆಯು 1.88 ಲಕ್ಷ ಟನ್.
ಕಾರ್ಯಗಳು
- ವಿವಿಧ ಅಭಿವೃದ್ಧಿ/ಕಲ್ಯಾಣ ಕಾರ್ಯಕ್ರಮಗಳ ಯೋಜನೆ, ಉತ್ತೇಜನೆ, ಸಮನ್ವಯತೆ, ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆ ಮಾಡುವುದು.
- ಒಳನಾಡು ಮೀನುಗಾರಿಕೆ ವಲಯದ ಅಭಿವೃದ್ಧಿಗಾಗಿ ಸಂಪನ್ಮೂಲಗಳ ಗರಿಷ್ಠ ಬಳಕೆ ಹಾಗೂ ಕರಾವಳಿ ವಲಯದ ಸುಸ್ಥಿರ ಮೀನು ಉತ್ಪಾದನೆಯನ್ನು ಸಾಧಿಸುವುದು
- ಮೀನುಗಾರರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು
- ಹಿಡುವಳಿ, ಇಳಿದಾಣ ಮತ್ತು ಮಾರುಕಟ್ಟೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸೃಜಿಸುವುದು
- ಜಲಕೃಷಿಗೆ ಬೇಕಾದ ಉತ್ತಮ ಗುಣಮಟ್ಟದ ಮೀನುಮರಿಗಳ ಉತ್ಪಾದನೆ ಮತ್ತು ಸರಬರಾಜು
- ಮೀನು ಕೃಷಿಕರಿಗೆ ತಾಂತ್ರಿಕ ಸಹಾಯವನ್ನು ಒದಗಿಸುವುದು
- ತಾಂತ್ರಿಕತೆಯನ್ನು ಉತ್ತಮಪಡಿಸಲು ಸಿಬ್ಬಂದಿಗೆ ತರಬೇತಿ ನೀಡುವುದು
ನಮ್ಮ ಪ್ರಮುಖ ಸೇವೆಗಳು
- ಪೂರ್ಣಕಾಲಿಕ ಮತ್ತು ಅರೆಕಾಲಿಕ ಕೆರೆಗಳ ಮೀನು ಪಾಶುವಾರು ಹಕ್ಕಿನ ವಿಲೇವಾರಿಯನ್ನು ಗುತ್ತಿಗೆ/ ಟೆಂಡರ್-ಕಂ-ಹರಾಜು ಮುಖಾಂತರ ನೀಡುವುದು.
- ಉತ್ತಮ ಮೀನು ಮರಿಗಳ ಉತ್ಪಾದನೆ ಮತ್ತು ಸರಬರಾಜು.
- ನಿಗಧಿತ ಶುಲ್ಕವನ್ನು ಪಾವತಿಸಿ ಜಲಸಂಪನ್ರ್ಮಲಗಳಾದ ಜಲಾಶಯಗಳು, ನದಿ ಭಾಗಗಳ ಮೀನು ಸಂಪತ್ತನ್ನು ಹಿಡಿಯಲು ಪರವಾನಿಗೆ ನೀಡುವುದು.
- ಜೌಗು ಭೂಮಿ ಮತ್ತು ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೈಗೊಳ್ಳಲು ಮೀನು ಕೊಳ ನಿರ್ಮಾಣಕ್ಕಾಗಿ ಸಹಾಯ.
- ಮೀನು ಮರಿ ಖರೀದಿಗೆ ಸಹಾಯ.
- ಅಲಂಕಾರಿಕ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಅಕ್ವಾಪಾರ್ಕ್ ಸ್ಥಾಪಿಸುವುದು.
- ಮೀನು ಮರಿ ಕೇಂದ್ರಗಳ ನವೀಕರಣ.
- ಜಲಾಶಯದಲ್ಲಿ ಮೀನು ಮರಿ ಬಿತ್ತನೆ.
- ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು ವಿತರಣೆ.
- ಮಣ್ಣು ಮತ್ತು ನೀರಿನ ಗುಣಮಟ್ಟ ಪರೀಕ್ಷೆ ಸೌಲಭ್ಯವನ್ನು ಜಿಲ್ಲಾ ಮಟ್ಟದ ಕಛೇರಿಗಳಲ್ಲಿ ಉಚಿತವಗಿ ನೀಡಲಾಗುವುದು.
ಹಾಗೂ ಪೊನ್.ನಂ) |
|||||
---|---|---|---|---|---|
1 |
ಶ್ರೀ ನಾಗರಾಜ ಎಸ್.ಆರ್. (ದೂರವಾಣಿ ಹಾಗೂ ಮೊ.ನಂ) |
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು | ಜಿಲ್ಹಾಧಿಕಾರಿಗಳ ಕಛೇರಿ ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು. |
sadf-blr-ka[at]nic[dot]in , Sradfbr06[at]yahoo[dot]in | |
2 | ಶ್ರೀ ಸುಬ್ರಮಣ್ಯ.ಎನ್. | ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2) | ಟಿ.ಪಿ ಬಿಲ್ಡಿಂಗ್, ಹೊಸಕೋಟೆ | 9845180161 | subs141[at]gmail[dot]com, adf[dot]hosakote[at]gmail[dot]com |
3 | ಶ್ರೀ ಅದಿಲ್.ಬಿ | ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2) | ದೊಡ್ಡಬಳ್ಳಾಪುರ ಟೌನ್, ದೊಡ್ಡಬಳ್ಳಾಪುರ | 9880625376 | adil[dot]b04[at]gmail[dot]com |
4 | ಶ್ರೀಮತಿ ಅಮೃತ .ಎನ್.ಎಸ್ | ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2) | ನೆಲಮಂಗಲ ಟೌನ್ | 9740360923 | amruthatumkur[at]gmail[dot]com |
5 | ಶ್ರೀ ಶಿವಕುಮಾರ್.ಎ.ಎಸ್. | ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2) | ಟಿ.ಪಿ ಬಿಲ್ಡಿಂಗ್ ,ದೇವನಹಳ್ಳಿ | 9739490259 | Shivakumaras569[at]gmail[dot]com |