ಘಾಟಿ ಸುಬ್ರಮಣ್ಯಮ್
ನಿರ್ದೇಶನಈ ದೇವಾಲಯದ ವಿಶಿಷ್ಠ ಲಕ್ಷಣವೆಂದರೆ ಇಲ್ಲಿನ ಗೋಪುರಗಳು ಪಿರಮಿಡ್ ಆಕೃತಿಯನ್ನು ಹೊಂದಿದೆ. ಇಲ್ಲಿನ ಶಿಲ್ಪಕಲಗಳು, ದ್ರಾವಿಡ ವಾಸ್ತು ಶೈಲಿಯಲಿಗೆ ಒಂದು ಉದಾಹರಣೆಯಗಿದೆ. ಇಲ್ಲಿನ ಶಿಲ್ಪಕಲೆಗಳು ಹಿಂದೂ ಪುರಾಣದ ವಿವಿಧ ದೇವತೆಗಳು ಶಿಲ್ಪಗಳಿಂದ ಅಲಂಕೃತಗೊಂಡಿದೆ. ಇಲ್ಲಿನ ವಿಗ್ರಹಗಳು ಇಲ್ಲಿಯವೇ ಎಂದು ನಂಬಲಾಗಿದೆ ಏಕೆಂದರೆ ಇಲ್ಲಿನ ದಂತಕಥೆಯ ಪ್ರಕಾರ ಕಾರ್ತಿಕೇಯ ಮತ್ತು ನರಸಿಂಹಮೂರ್ತಿಯ ವಿಗ್ರಹಗಳು ನೆಲದಿಂದ ಉದ್ಭವಗೊಂಡು ಅನಂತರ ಇದರ ಸುತ್ತ ಡೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ದೇವಸ್ಥಾನದ ಒಂದು ಆಂಟಿಲ್ ಇದೆ. ಅದರ ಮೇಲೆ ಭಕ್ತರು ಹಾಲು ಸುರಿಯುತ್ತಾರೆ.
ಈ ದೇವಾಲಯದ ವಿಶಿಷ್ಠ ಅಂಶವೇನೆಂದರೆ ಇಲ್ಲಿ ಜನರು ಎರಡು ದೇವತೆಗಳನ್ನು ಕಾಣಬಹುದು. ಅವು ಯಾವುವೆಂದರೆ ಸುಬ್ರಮಣ್ಯ ಮತ್ತು ನರಸಿಂಹ. ಈ ಎರಡು ದೇವರುಗಳ ವಿಗ್ರಹಗಳು ಇಲ್ಲಿ ಕಂಡುಬರುತ್ತವೆ. ಸರ್ಪರೂಪದಲ್ಲಿನ ಸುಬ್ರಮಣ್ಯಮೂರ್ತಿಯು ಪೂರ್ವಕ್ಕೆ ಎದುರಾಗಿರುವ ಸಂದರ್ಭದಲ್ಲಿ, ನರಸಿಂಹನ ವಿಗ್ರಹವು ಹಿಂದಿನ ಭಾಗದಲ್ಲಿ ಕುಳಿತು ಪಶ್ಚಿಮಕ್ಕೆ ಮುಖ ಮಾಡಿತು ಎಂಬುದು ವಾಡಿಕೆ. ಭಕ್ತಾದಿಗಳು ನರಸಿಂಹನ ವಿಗ್ರಹವನ್ನು ಆಯಕಟ್ಟಿನ ಭಿತ್ತಿಯ ಮೂಲಕ ವೀಕ್ಷಿಸಬಹುದು. ಅದೇ ಸಮಯದಲ್ಲಿ ಇಬ್ಬರು ದೇವತೆಗಳನ್ನು ಪೂಜಿಸಬಹುದು. ಕಾರ್ತಿಕೇಯ ಅಥವಾ ಸುಬ್ರಮಣ್ಯನ ವಿಗ್ರಹವನ್ನು ಒಂದೆ ಕಲ್ಲಿನಿಂದ ಕೆತ್ತಲಾಗಿದೆ.
ಘಾಟಿ ಸುಬ್ರಮಣ್ಯ ಪುರಾತನ ಹಿಂದೂ ದೇವಾಲಯವಾಗಿದ್ದು, ಈ ದೇವಾಲಯವು ದೊಡ್ಡಬಳ್ಳಪುರ ತಾಲ್ಲೂಕಿನ ತೂಬಗೆರೆಯ ಬಳಿ ಇದೆ. ಇದು ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ ಮತ್ತು ಇದು ಒಂದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಈ ದೇವಾಲಯದ ಮುಖ್ಯ ವಿಶಿಷ್ಟತೆಯೆಂದರೆ ಪ್ರಧಾನ ದೇವತೆಯಾದ ಸುಬ್ರಮಣ್ಯನು ನರಸಿಂಹನೊಂದಿಗೆ ಕಂಡುಬರುವುದು. ಪುರಾಣದ ಪ್ರಕಾರ ಎರಡು ವಿಗ್ರಹಗಳು ಭೂಮಿಯಿಂದ ಹೊರಹೊಮ್ಮಿದೆ ಎಂದು ನಂಬಲಾಗಿದೆ. ದಕ್ಷಿಣ ಭಾರತದಲ್ಲಿ ನಾಗ ಪೂಜೆಗೆ ಈ ದೇವಾಲಯವು ಪ್ರಮುಖ ಕೇಂದ್ರವಾಗಿದೆ. ಬ್ರಹ್ಮ ರಥೋತ್ಸವವು ಇಲ್ಲಿನ ಮತ್ತೊಂದು ಪ್ರಮುಖ ಉತ್ಸವವಾಗಿದೆ. ಘಾಟಿ ಸುಬ್ರಮಣ್ಯ 600 ವರ್ಷಗಳಿಗೂ ಹೆಚ್ಚು ಕಾಲ ಇತಿಹಾಸವನ್ನು ಹೊಂದಿದೆ. ಈ ದೇವಾಲಯವನ್ನು ಮೊದಲು ಅಭಿವೃದ್ದಿಪಡಿಸಿದವರು ಬಳ್ಳಾರಿ ಭಾಗಗಳನ್ನು ಆಳಿದ ಸಾಂದೂರ್ನ ಘೋರ್ಪಡೆ ಅಡಳಿತಗಾರರು
ತಲುಪುವ ಬಗೆ:
ವಿಮಾನದಲ್ಲಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿಮೀ. ದೇವನಹಳ್ಳಿ
ರೈಲಿನಿಂದ
ಸಮೀಪದ ರೈಲ್ವೆ ದೊಡ್ಮಡಬಳ್ಳಾಪುರ ಮತ್ತು ಬೆಂಗಳೂರು
ರಸ್ತೆ ಮೂಲಕ
ಬೆಂಗಳೂರಿನಿಂದ 55 ಕಿ.ಮೀ. ದೂರದಲ್ಲಿ ದೊಡ್ಡಬಳ್ಳಾಪುರ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಿಂದ 15 ಕಿ.ಮೀ