Close

ಉತ್ಪಾದನೆ

Type:  
ಉದ್ಯಮ
ಸೀರೆ

ದೊಡ್ಡಬಳ್ಳಾಪುರದ ಅಪ್ಪಟ ರೇಷ್ಮೆ ಸೀರೆಗಳು

ಜಿಲ್ಲೆಯಲ್ಲಿ ಉತ್ಪಾದಿಸುವ ಅಪ್ಪಟ ರೇಶ್ಮೇ ಸೀರೆಗಳಿಗೆ ಹೆಸರುವಾಸಿಯಾಗಿದ್ದು, ಅಪ್ಪಟ ಜರಿಯನ್ನು ಬಳಸಿ ಪಲ್ಲವ್, ಬುಟ್ಟ ಮತ್ತು ಬಾರ್ಡ್‍ರ್ ಸೀರೆಗಳಿಗೆ ಹೆಚ್ಚಿನ ಅಂದ ಮತ್ತು ಮೆರಗನ್ನು ನೀಡುವ ಮಾದರಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕೈಮಗ್ಗ ನೇಯ್ಗೆಯಲ್ಲಿ ನಿಪುಣತೆ ಹೊಂದಿರುವ ನೇಕಾರರು ಈ ವೃತ್ತಿಯಲ್ಲಿ ತೊಡಗಿರುತ್ತಾರೆ. ಪ್ರತಿ ಸೀರೆಯ ಅಂದಾಜು 850 ರಿಂದ 1000 ಗ್ರಾಂ ತೂಕದಿಂದ ಕೂಡಿರುತ್ತದೆ. ವಿಶೇಷವಾಗಿ ಹಬ್ಬ ಮತ್ತು ಮದುವೆ ಶುಭ ಸಮಾರಂಭಗಳಿಗೆ ಬಳಕೆ ಮಾಡುವ ಉತ್ತಮ ಗುಣಮಟ್ಟ ಹಾಗೂ ನೈಪುಣ್ಯತೆಯ ಆಕರ್ಷಣೀಯ ಬಣ್ಣವನ್ನು ಹೊಂದಿರುವ ಉತ್ಪನ್ನಗಳಾಗಿರುತ್ತವೆ.ಜಿಲ್ಲೆಯಲ್ಲಿ ಉತ್ಪಾದಿಸುವ ಕೈಮಗ್ಗದ ಅಪ್ಪಟ ರೇಶ್ಮೇ ಸಿರೆಗಳಿಗೆ ಸ್ಥಳೀಯವಾಗಿ ಬೇಡಿಕೆ ಇದ್ದು ಶುಭ ಸಮಾರಂಭಗಳಿಗೆ ಬಯಸುವ ಗ್ರಾಹಕರು ಕೈಮಗ್ಗ ನೇಕಾರರ ಸಹಕಾರ ಸಂಘಗಳು ಅಸ್ತಿತ್ವದಲ್ಲಿರುವ ನೆಲವಾಗಿಲು, ವಿಜಯಪುರ ಮತ್ತು ನೆಲಮಂಗಲದ ಬಿನ್ನಮಂಗಲ ಕೈಮಗ್ಗ ಸಹಕಾರ ಸಂಘಗಳಲ್ಲಿ ಖರೀದಿಸಲು ಹೆಚ್ಚಿನ ಬೇಡಿಕೆ ಇರುವ ಉತ್ಪನ್ನಗಳು ದೊರೆಯಲಿವೆ. ಮುಂದುವರೆದು ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕತೆಯ ಅಭಿವೃದ್ಧಿ ಮತ್ತು ಉನ್ನತೀಕರಣದಿಂದ ಕೈಮಗ್ಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು ಯುವ ಪೀಳಿಗೆ ಕೈಮಗ್ಗ ವೃತ್ತಿಯನ್ನು ಬಯಸದೇ ವಿದ್ಯುತ್ ಚ್ಛಾಲಿತ ಮಗ್ಗಗಳಲ್ಲಿ ಆಕರ್ಷಣೀಯವಾಗಿದ್ದು ಹೆಚ್ಚಿನ ಉತ್ಪಾದನೆ ಮತ್ತು ಆರ್ಥಿಕ ಸಧೃಡತೆ ಹೊಂದಿ ತಮ್ಮ ದೈನಂದಿನ ಜೀವನವನ್ನು ಸುಧಾರಣೆಯತ್ತ ಬಯಸಿರುತ್ತಾರೆ.

 

ದೇವನಹಳ್ಳಿ ಚಕ್ಕೋತ

pomelo

ದೇವನಹಳ್ಳಿ ಚಕ್ಕೋತ Devanahalli pomelo

ಇದು ದೇವನಹಳ್ಳಿಯ ಹೆಸರುವಾಸಿ ಹಣ್ಣು. ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಈ ಹಣ್ಣಿನಲ್ಲಿ ‘ಎ’ ‘ಬಿ’ ಮತ್ತು ‘ಸಿ’ ಜೀವಸತ್ವಗಳು ಹೇರಳವಾಗಿವೆ.ಈ ಹಣ್ಣಿನ ಹೊರಸಿಪ್ಪೆ ತೆಗೆದು ತೊಳೆಗಳನ್ನು ಹಾಗೆಯೇ ಬಿಡಿಸಿ ತಿನ್ನುತ್ತಾರೆ. ಬೇರ್ಪಡಿಸಿ ಸಲಾಡ್ ಮತ್ತು ಸಿಹಿತಿಂಡಿಗಳಲ್ಲಿ ಬಳಸಬಹುದು ಅಥವಾ ಸಂರಕ್ಷಿಸಬಹುದು. ಹೊರತೆಗೆದ ರಸವು ಅತ್ಯುತ್ತಮ ಪಾನೀಯವಾಗಿದೆ. ಸಿಪ್ಪೆ ಕ್ಯಾಂಡಿ ಮಾಡಬಹುದು

ಕಿತ್ತಳೆ ಜಾತಿಯ ಹಣ್ಣುಗಳಲ್ಲೇ ದೊಡ್ಡ ಗಾತ್ರದ ಚಕ್ಕೋತವನ್ನುನಾಡಿನ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚಕ್ಕೋತಕ್ಕೆ ಎಲ್ಲೆಡೆ ಬೇಡಿಕೆ. ಇಲ್ಲಿನ ಹಣ್ಣು ವಿಸೀಷ್ಟವಾದ ಹುಳಿ-ಸಿಹಿ ಮಿಶ್ರಣ ಹಾಗೂ ಸುವಾಸನೆಯಿಂದಲೇ ಹೆಚ್ಚು ಪ್ರಸಿದ್ದಿ. ಸಿಟ್ರೋಸ್ ಗ್ರ್ಯಾಂಡಿಸ್ ಎಂದು ವೈಜ್ಞಾನಿಕವಾಗಿ ಕರೆಯುವ ಚಕ್ಕೋತ, ರೋಟಾಸ್ ಸಿಯೋ ಸಸ್ಯ ಜಾತಿಗೆ ಸೇರಿದೆ. ಇದನ್ನೇ ಇಡಿಯಾಗಿ ಬೆಳೆಯುವುದು ಕಡಿಮೆ. ಆದರೆ ತೆಂಗು, ಅಡಿಕೆ ತೋಟಗಳ ಬದುಗಳಲ್ಲಿ ಮತ್ತು ಮನೆಯ ಅಂಗಳ ಹಾಗೂ ಹಿತ್ತಲಲ್ಲಿ ಬೆಳೆಯಲಾಗುತ್ತದೆ. ದೇವನಹಳ್ಳಿ ಚಕ್ಕೋತಕ್ಕೆ ಸುಮಾರು 350 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಹೈದರ್ ಅಲಿ ಹಾಗೂ ಟಿಪ್ಪು ಸುಲ್ತಾನ್ ಚಕ್ಕೋತ ಹಣ್ಣನ್ನು ದೇವನಹಳ್ಳಿಗೆ ಪರಿಚಯಿಸಿದ್ದರು ಎನ್ನಲಾಗಿದ್ದು, ಮೈಸೂರಿನ ಮಹಾರಾಜರು ಮತ್ತು ರಾಜಪರಿವಾರ ಇಲ್ಲಿನ ರುಚಿಕರ ಹಣ್ಣಿಗೆ ಮನಸೋತಿತ್ತು.ಇಲ್ಲಿ ಬೆಳೆಯುವ ಚಕ್ಕೋತ ತಳಿಯ ಹಣ್ಣಿನ ಒಳಭಾಗ ಬಿಳಿ ಮತ್ತು ಕೆಂಪಾಗಿದ್ದು, ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಹೊಂದಿದೆ. ರಸಭರಿತವಾಗಿದೆ ಮಣ್ಣಿನ ಫಲವತ್ತತೆ.ನೀರು ಬಸಿದುಕೊಂಡು ಹೋಗುವ ಗೋಡು ಮಣ್ಣಿನಿಂದ ಕೂಡಿದ ಪ್ರದೇಶ ಚಕ್ಕೋತ ಬೆಳೆಯಲು ಸೂಕ್ತ .ಬೀಜ ಹಾಕಿ ಬೆಳೆಸಿದರೆ ಆರು ವರ್ಷಕ್ಕೆ ಕಾಯಿ ಬಿಡಲು ಆರಂಭ, ಆದರೆ ಕಸಿ ಮಾಡಿದ ಸಸಿಗಳನ್ನು ನೆಟ್ಟು ಬೆಳೆಸಿದಲ್ಲಿ ಎರಡು ವರ್ಷಕ್ಕೆ ಫಸಲು ಕಾಣಬಹುದು. ಮಣ್ಣಿನ ಫಲವತ್ತತೆ ಹಾಗೂ ಆರೈಕೆ ಮೇಲೆ ಗಿಡಗಳ ಆಯಸ್ಸು, ನಿರ್ಧಾರವಾದರೂ 25 ರಿಂದ 30 ವರ್ಷದವರೆಗೆ ಒಂದೇ ಗಾತ್ರದ ಹಣ್ಣು ನಿರೀಕ್ಷಿಸಬಹುದು. ನಂತರ ಗಾತ್ರದಲ್ಲಿ ಕಡಿಮೆಯಾಗುತ್ತಾ ಬರುತ್ತದೆ. ಈ ಹಣ್ಣುಗಳ ಒಂದು ತಿಂಗಳು ಹಾಗೇಯೇ ಇಟ್ಟರೂ ಕೆಡುವುದಿಲ್ಲ.ತಾಲ್ಲೂಕಿನಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆದಾಗಲೂ ಅಥೀತಿಗಳಿಗೆ ಚಕ್ಕೋತ ಹಣ್ಣನ್ನು ನೀಡುವುದು ವಾಡಿಕೆ. ಆದರೂ ಈ ಹಣ್ಣುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲ. ಹೊರಗಿನಿಂದ ಬರುವ ಮಾರಾಟಗಾರರು ಮತ್ತು ದಲ್ಲಾಳಿಗಳಿಗೆ ಎಣಿಕೆ ಲೆಕ್ಕದಲ್ಲಿ ರೈತರು ಹಣ್ಣು ಮಾರುತ್ತಾರೆ. ಸಧ್ಯಕ್ಕೆ ಪಟ್ಟಣದ ರಸ್ತೆಯಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯ ಕೈ ಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹಣ್ಣಿನ ಬೆಲೆ ಕಿಲೋಗೆ ರೂ.30 ರಿಂದ 45 ರೂಗಳು.
ದೇವನಹಳ್ಳಿ ಚಕ್ಕೋತ ತಳಿ ಅಭಿವೃದ್ಧಿಗಾಗಿ ತೋಟಗಾರಿಕೆ ಇಳಾಕೆ ಸಂಶೋಧನಾ ಕೇಂದ್ರ ಸ್ಥಾಪಿಸಿ ಸಂರಕ್ಷಣಾ ತಾಕನ್ನು ಅಭಿವೃದ್ಧಿ ಪಡಿಸಿದೆ. ಕಡಿಮೆ ದರದ್ಲಿ ಸಸಿ ನೀಡಲು ಮುಂದಾಗಿದೆ.