Close

ದೇವನಹಳ್ಳಿ ಕೋಟೆ

ನಿರ್ದೇಶನ
ವರ್ಗ ಐತಿಹಾಸಿಕ
  • ಕೋಟೆ
  • ಕೋಟೆ
  • ಕೋಟೆ
  • district features
  • ದೇವನಹಳ್ಳಿ ಕೋಟೆ
  • ದೇವನಹಳ್ಳಿ ಕೋಟೆ

ದೇವನಹಳ್ಳಿ ಕೋಟೆ ಇತಿಹಾಸ

ದೇವನಹಳ್ಳಿ ಮೊದಲು ಗಂಗವಾಡಿ ಭಾಗವಾಗಿತ್ತು ನಂತರ ರಶಾತರಕೂಟರು, ನೊಲಂಬ, ಪಲ್ಲವರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟರು. ಕ್ರಿ ಶ 1501 ರಲ್ಲಿ ದೇವನಹಳ್ಳಿಯ ಕೋಟೆಯನ್ನು, ದೇವನದೊಡ್ಡಿಯಲ್ಲಿ ದೇವರಾಯನ ಒಪ್ಪಿಗೆಯೊಂದಿಗೆ ಮಣ್ಣಿನ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯು ಕ್ರಿ ಶ 1747 ರಲ್ಲಿ ನಂಜರಾಜ ನೇತೃತ್ವದಲ್ಲಿ ಮೈಸೂರು ಅರಸರ ಕೈಗೆ ತಲುಪಿತು. ಈ ಕೋಟೆಯು ಅನೇಕ ಸಲ ಮರಾಠರುಗಳ ಅಳ್ವಿಕೆಯಲ್ಲಿತ್ತು. ಹಾಗೂ ನಂತರ ಹೈದರಾಲಿ ಹಾಗೂ ಅವಾ ಮಗ ಟಿಪ್ಪುಸುಲ್ತಾನನ ನಿಯಂತ್ರಣದಲ್ಲಿತ್ತು. ಟಿಪ್ಪು ಸುಲ್ತಾನ್ ಈ ಕೋಟೆಗೆ ಹೊಸದಾಗಿ ಯುಸಫಾಬಾದ್ ಎಂದು ನಾಮಕರಣ ಮಾಡಿದರು. ದೇವನಹಳ್ಳಿ ಕೋಟೆಯು ಅಂತಿಮವಾಗಿ 1791ರ ಮೈಸೂರು ಯುಧ್ದದಲ್ಲಿ ಲಾರ್ಡಕಾರ್ನವಾಲೀಸ್ ನೇತೃತ್ವದಲ್ಲಿ ಬ್ರಿಟೀಷ್ ಸರ್ಕಾರದೊಂದಿಗೆ ಸೇರಿಕೊಂಡಿತ್ತು.

ದೇವನಹಳ್ಳಿ ಕೋಟೆಯ ವಾಸ್ತು ಶಿಲ್ಪ

ಪ್ರಸ್ತುತ ದೇವನಹಳ್ಳಿ ಕೋಟೆಯು ಟಿಪ್ಪು ಸುಲ್ತಾನ್ ಹಾಗೂ ಅವನ ತಂದೆ ಹೈದರಾಲಿ ರವರಿಂದ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಈ ಕೋಟೆಯು 20 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಈ ಕೋಟೆಯು ಅಂಡಾಕಾರದಲ್ಲಿ ನಿರ್ಮಿಸಲಾಗಿದೆ. ಅಂಡಾಕಾರದ ಆಂತರಿಕ ಕೋಟೆಯು ಶುಷ್ಕವಾಗಿದ್ದು, ನಿಯಮಿತ ಮಧ್ಯಂತರಗಳಲ್ಲಿ 12 ಅರೆ ವೃತ್ತಾಕಾರದ ಕೊತ್ತಲಗಳನ್ನು ಹೊಂದಿದೆ. ಕೋಟೆಯ ಪೂರ್ವ ಹಾಗೂ ಪಶ್ಚಿಮದಲ್ಲಿ ಕಟ್ ಪ್ಲಾಸ್ಟವರ್ಕ್‍ನಿಂದ ಅಲಂಕರಿಸಲ್ಪಟ್ಟಿದೆ. ಗೋಡೆಗಳನ್ನು ಸುಣ್ಣ ಹಾಗೂ ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗಿದೆ.

ತಲುಪುವ ಬಗೆ:

ವಿಮಾನದಲ್ಲಿ

ಬೆಂಗಳೂರು ಅಂತರಾಷ್ಡೀಯ ವಿಮಾನ ನಿಲ್ದಾಣ ದೇವನಹಳ್ಳಿಯಿಂದ 3 ಕಿ.ಮೀ ದೂರದಲ್ಲಿದೆ

ರೈಲಿನಿಂದ

ಬೆಂಗಳೂರು ಸಿಟಿ ರೈಲು ನಿಲ್ದಾಣ 45 ಕಿ.ಮೀ ಹತ್ತಿರದಲ್ಲಿದೆ

ರಸ್ತೆ ಮೂಲಕ

ಕೆ ಎಸ್ ಆರ್ ಟಿ ಸಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಸಿಗುತ್ತವೆ. ಬೆಂಗಳೂರು ಬಸ್ ನಿಲ್ದಾಣದಿಂದ 40 ಕಿ.ಮೀ ದೂರದಲ್ಲಿದೆ.

ವೀಡಿಯೊ