Close

ಮಾಕಳಿ ದುರ್ಗ

ನಿರ್ದೇಶನ
ವರ್ಗ ಅಡ್ವೆಂಚರ್
  • ಮಾಕಳಿ ದುರ್ಗ
  • ಮಾಕಳಿ ದುರ್ಗ ದ ಚಾರಣ
  • ಮಾಕಳಿ ದುರ್ಗ ದ ಚಾರಣ
  • ಮಾಕಳಿ ದುರ್ಗ ದ ಮನೋಹರನೋಟ
  • ಮಾಕಳಿ ದುರ್ಗ ದ  ಚಾರಣ
  • Places for trekking

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ  18 ಕಿಲೋಮೀಟರ್ ಹಾಗೂ  ಘಾಟಿಸುಬ್ರಮಣ್ಯ ದೇವಸ್ಥಾನದಿಂದ  6.4 ಕಿ.ಮೀ ದೂರದಲ್ಲಿರುವ ಮಾಕಳಿ ದುರ್ಗವು ಬೆಟ್ಟದವು ಸಂಪತ್ತ ಭರಿತವಾದ ನೈಸರ್ಗಿಕ ಸ್ಥಳವಾಗಿದೆ. ಬೆಂಗಳೂರಿನಿಂದ 55 ಕಿ.ಮಿ ದೂರದಲ್ಲಿರುವ ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 4432 ಅಡಿ ಎತ್ತರದಲ್ಲಿರುವ ಈ ಬೆಟ್ಟದಡಿಯಲ್ಲಿ ssssss ಸರೋವರವಿದ್ದು. ದಕ್ಷಿಣ ಅಮೇರಿಕದ ಖಂಡದಂತೆ ತೋರುತ್ತದೆ.   ಹಚ್ಚ ಹಸಿರಿನ ಹುಲ್ಲುಗಳು ಮತ್ತು ಪ್ರಕೃತಿಯ ಅದ್ಭುತ ದೃಶ್ಯಗಳು ಸಾಹಸ ಪ್ರವಾಸಿಗರಿಗೆ ಪ್ರಶಸ್ತವಾದ ತಾಣವಾಗಿದೆ.  ಮಾಕಳಿದುರ್ಗ ಕೋಟೆಯು ಬೃಹತ್ ಗ್ರಾನೈಟ್ ಬೆಟ್ಟದ ತುದಿಯಲ್ಲಿದೆ.ಈ ಕೋಟೆಯು ಸುಮಾರು 1,117 ಮೀಟರ್ ಎತ್ತರದ ಬೆಟ್ಟದ ತುದಿಯಲ್ಲಿ ನಿರ್ಮಾಣಗೊಂಡಿದೆ. ಇಲ್ಲಿಗೆ ಬರುವ ಹೆಚ್ಚಿನ ಪ್ರವಾಸಿಗರು  ರಾತ್ರಿ ವೇಳೆಯಲ್ಲಿ ಟ್ರಕಿಂಗ್ ಮಾಡುತ್ತಾರೆ. ಈ ಬೆಟ್ಟಕ್ಕೆ ಮಾಕಳಿ ಗ್ರಾಮದಿಂದಲೂ ಪ್ರವೇಶಿಸಬಹುದು ಹಾಗೂ ಮಾಕಳೀದುರ್ಗ ರೈಲ್ವೆನಿಲ್ದಾಣದ ಪಕ್ಕದಲ್ಲಿರುವ ಬಂಡಿಜಾಡಿನಿಂದಲೂ ಸಂಪರ್ಕವನ್ನು ಪಡೆಯಬಹುದು.ಮಾಕಳೀದುರ್ಗವು ಉತ್ತರ ದಿಕ್ಷಿಣದಲ್ಲಿ ಇತರ ಬೆಟ್ಟಗಳಿಂದ ಸೇರಿಕೊಂಡಿರುವಷ್ಟು ಭಾಗವನ್ನು ಬಿಟ್ಟರೆ ಉಳಿದ ಎಲ್ಲ ಭಾಗವು ಕಡಿದಾದ ಊಧ್ರ್ಛಗಾಮಿ ಶಿಲಾಮುಖಗಳಿಂದ ಕೂಡಿದೆ.

ಬೆಟ್ಟದ ಬುಡ ಬಿಸಿವಾತಾವರಣದಿಂದ ಕೂಡಿದ್ದರೆ ಮೇಲಕ್ಕೆ ಹೋದತೆಂಲ್ಲಾ ಹವಾಗುಣ ತಂಪಾಗುವುದನ್ನು ಅನುಭವಿಸಿಬಹುದು.ಸುಮಾರು ಮೂರು ಮೈಲಿಯ ಕುದುರೆಮಾರ್ಗ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಮೇಲೇರುತ್ತದೆ.ಈ ಬೆಟ್ಟದ ಮತ್ತು ಸುತ್ತಮುತ್ತಲಿನ ಕಾಡುಗಳಲ್ಲಿ ವಿರಳವಾಗಿ ಚಿರತೆಗಳು, ಅಧಿಕವಾಗಿ ಕಾಡುಹಂದಿ, ಮುಳ್ಳುಹಂದಿ, ಮೊಲ, ಕಾಡುಕೋಳಿ, ನರಿ, ನವಿಲು, ತೋಳಗಳು, ಇವೆ. ಬೆಟ್ಟದ ಮೇಲೆ ನಿಂತು ನೋಡಿದರೆ ವಿಶಾಲವಾದ ಬಯಲು ಹತ್ತಾರು ಕೆರೆಕುಂಟೆಗಳು, ಹೊಲಗದ್ದೆಗಳು ಹಚ್ಚಹಸಿರಿನಿಂದ ಕಂಗೊಳಿಸುವುದನ್ನು ಕಾಣಬಹುದು.ಅಲ್ಲದೆ ಸುತ್ತಲಿನ ಗ್ರಾಮಗಳಾದ ಮಾಕಳಿ, ಗುಂಡುಮಗರೆ, ಘಾಟಿ, ಲಗುಮೇನಹಳ್ಳಿ, ಗುಂಜೂರು, ಸೊಣ್ಣೇನಹಳ್ಳಿ, ದೊಡ್ಡಬಳ್ಳಾಪುರ ಪಟ್ಟಣ ಎಲ್ಲವೂ ಕಾಣುತ್ತದೆ.ಮಾಕಳೀ ಬೆಟ್ಟವು ಮಾರ್ಕಂಡೇಯ ಋಷಿಮುನಿಗಳ ತಪೋವನ ಆಗಿತ್ತೆಂಬ ನಂಬಿಕೆಯಿದೆ.

ಮಾಕಳೀಬೆಟ್ಟದಲ್ಲಿ ಟಿಪ್ಪುಸುಲ್ತಾನನು ಕೋಟೆಯನ್ನು ನಿರ್ಮಿಸುವ ಮೊದಲೇ ವಿಜಯನಗರ ಕಾಲಾವಧಿಯಲ್ಲಿ ಆವತಿ ನಾಡಪ್ರಭುಗಳಾದ ದೊಡ್ಡಬಳ್ಳಾಪುರದ ಪಾಳೆಗಾರರು ದೊಡ್ಡಬಳ್ಳಾಪುರ ಪಟ್ಟಣದಲ್ಲಿ ಕೋಟೆಯನ್ನು ನಿರ್ಮಿಸುವ ಕಾಲಕ್ಕೆ ಇಲ್ಲಿಯೂ ಬೃಹತ್ ಕೋಟೆಯೊಂದನ್ನು ನಿರ್ಮಿಸಿದರು ಅದು ಇಂದಿಗೂ ‘ಮಾಕಳೀದುರ್ಗ’ ವೆಂದೇ ಪ್ರಸಿದ್ದವಾಗಿದೆ.ಇದು ಅವರ ಸೈನ್ಯಕ್ಕೆ ತರಬೇತಿ ನೀಡುವ ಕೇಂದ್ರವಾಗಿತ್ತು. ಬಳ್ಳಾಪುರದ ದೊರೆಗಳು ವಿಜಯನಗರ ಶೈಲಿಗನುಗುಣವಾಗಿ ವಿಶಿಷ್ಟ ಕೌಶಲದಿಂದ ಕೂಡಿದ ಭದ್ರವಾದ ಜಿಂಜಾಲು(ಗೋಡೆ)ಗಳನ್ನು ಬೃಹತ್ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ್ದರು. ಬೆಟ್ಟದ ಮೇಲೆ ವಿಸ್ತಾರ ಪ್ರಸ್ತಭೂಮಿಯಿದ್ದು, ಅದು ಪಶ್ಚಿಮಕ್ಕೆ ಇಳಿಜಾರಾಗಿದೆ.ಈ ಜಾಗದಲ್ಲಿ ‘ಮಾಕಳಿ ಮಲ್ಲೇಶ್ವರ’ ನೆಂದೇ ಹೆಸರಾಗಿರುವ ಈಶ್ವರನ ಗುಡಿಯೊಂದಿದೆ ಅದರಲ್ಲಿ ಶಿವಲಿಂಗವಿದ್ದು, ಗುಡಿಯ ಎದುರಿಗೆ ಬಸವನ ವಿಗ್ರಹ ಮತ್ತು ಗರುಡಗಂಬವಿದೆ.ದೇಗುಲದ  ಪ್ರವೇಶದ್ವಾರದ  ಮೇಲೆ  ಇಟ್ಟಿಗೆ  ಮತ್ತು ಗಾರೆಯಿಂದ ನಿರ್ಮಿಸಲ್ಪಟ್ಟ ಒಂದು ಗೂಡಿದೆ. ಈಗ್ ಅದರಲ್ಲಿ ಯಾವುದೇ ವಿಗ್ರಹವಿಲ್ಲ. ಗೂಡಿನ ಇಕ್ಕೆಲಗಳಲ್ಲಿ ಗಾರೆಯಿಂದ ನಿರ್ಮಿಸಿರುವ ಬಸವನ ವಿಗ್ರಹಗಳಿವೆ. ಈ ದೇವಾಲಯದ ಹಿಂದುಗಡೆ ಸ್ವಲ್ಪ ದೂರದಲ್ಲಿ ಅನೇಕ ಕಡೆ ಕಲ್ಲಿನಿಂದ ನಿರ್ಮಾಣವಾಗಿದ್ದ್ದ ಈಗ ಹಾಳಾಗಿರುವ ವಸತಿ ಸಮುಚ್ಛಯವನ್ನು ಗುರುತಿಸಬಹುದು.

ಸಣ್ಣದಾಗಿ ಹನಿಯುತ್ತಿರುವ ಮಳೆಗೆ ಮಾಕಳಿ ಬೆಟ್ಟ ಹಸಿರು ಹೋದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.ಹೀಗಾಗಿಯೇ ಬೆಟ್ಟಕ್ಕೆ ಬರುವ ಚಾರಣಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಬೆಟ್ಟಕ್ಕೆ ಹತ್ತಲು ಮೆಟ್ಟಿಲು ಇಲ್ಲವಾದರೂ ಕಾಲು ನಡಿಗೆಯಲ್ಲಿ ಹತ್ತಲು ಸಾಧ್ಯವಾಗುವಂತಹ ರೀತಿಯಲ್ಲಿ ಕಾಲು ದಾರಿ ಇದೆ. ಬೆಟ್ಟಕ್ಕೆ ಬರುವ ಹೊಸಬರು ದಾರಿ ತಪ್ಪದಿರಲಿ ಎಂದು ಬಂಡೆಗಳ ಮೇಲೆ ಅಲ್ಲಲ್ಲಿ  ಮಾರ್ಗ ಸೂಚಿಸುವ ಗುರುತು ಬರೆಯಲಾಗಿದೆ.

ಪಾಳೆಗಾರರ ಆಡಳಿತದ ಅಂದಿನ ಕಾಲಕ್ಕೆ ಮದ್ದು ಗುಂಡುಗಳನ್ನು ಸಂಗ್ರಹಿಸಿಡುವ ಸುರಕ್ಷಿತ ತಾಣವಾಗಿಯೂ ಈ ಬೆಟ್ಟ ಹೆಸರು ಮಾಡಿದೆ.ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಸಹ ಬೆಟ್ಟದ ಮೇಲೆ ಮದ್ದಿನ ಮನೆಯನ್ನು ಕಾಣಬಹುದಾಗಿದೆ.ಈಗಲು ಈ ಮದ್ದಿನ ಮನೆಗಳು ಸುಸ್ಥಿತಿಯಲ್ಲಿವೆ. ಮಳೆ ಬಂದರೆ ಈ ಮನೆಗಳಲ್ಲಿ ಅಥವಾ ಮಾಕಳಿ ಮಲ್ಲೇಶ್ವರ ದೇವಾಲಯದಲ್ಲಿ ನಿಂತು ರಕ್ಷಣೆ ಪಡೆಯಬಹುದಾಗಿದೆ.ಮಾಕಳಿ ಬೆಟ್ಟವನ್ನು ಅರಣ್ಯ ಇಲಾಖೆ ‘ಇಕೋ ಟೂರಿಸಂ’ ಸ್ಥಳವನ್ನಾಗಿ ಗುರುತಿಸಿರುವುದರಿಂದ ಆನ್ ಲೈನ್ ಮೂಲಕ ಸೀಟ್ ಕಾಯ್ದಿರಿಸಿಕೊಂಡು ಬೆಟ್ಟಕ್ಕೆ ಚಾರಣ ಹೋಗಬಹುದಾಗಿದೆ.

  1. ಪ್ರವಾಸಿಗರ ಅಂಕಿ ಸಂಖ್ಯೆ: ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು ತಿಂಗಳಿಗೆ ಅಂದಾಜು 1500 ದೇಶಿಯರು ಹಾಗೂ ಸುಮಾರು 50 ವಿದೇಶಿಯ ಪ್ರವಾಸಿಗರು ಬೇಟಿ ನೀಡುತ್ತಾರೆ.
  2. ಪ್ರಸ್ತುತ ಯಾವುದೇ ಮೂಲಭೂತ ಸೌಲಭ್ಯ ಇರುವುದಿಲ್ಲ.

ತಲುಪುವ ಬಗೆ:

ವಿಮಾನದಲ್ಲಿ

ಬೆಂಗಳೂರು ಅಂತರಾಷ್ಡೀಯ ವಿಮಾನ ನಿಲ್ದಾಣ ದೇವನಹಳ್ಳಿಯಿಂದ 46 ದೂರದಲ್ಲಿದೆ

ರೈಲಿನಿಂದ

ಎರಡು ರೈಲುಗಳು ಲಭ್ಯವಿದೆ, ಒಂದು ಬೆಂಗಳೂರು ಕ್ಯಾಂಟ್. - ವಿಜಯವಾಡಾ ಪ್ಯಾಸೆಂಜರ್ ಮತ್ತು ಕೆಎಸ್ಆರ್ ಬೆಂಗಳೂರು - ಹಿಂದುಪುರ

ರಸ್ತೆ ಮೂಲಕ

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ 60 ಕಿ.ಮೀ , ದೊಡ್ಡಬಳ್ಳಾಪುರದಿಂದ 15 ಕಿಲೋಮೀಟರ್ ದೂರವಿದೆ

ವೀಡಿಯೊ