Close

ವಿಶ್ವಶಾಂತಿ ಆಶ್ರಮ , ವಿಜಯ ವಿಠ್ಠಲ ಮಂದಿರ

ನಿರ್ದೇಶನ
ವರ್ಗ ಧಾರ್ಮಿಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಅರಿಶಿನ ಕುಂಟೆ ಗ್ರಾಮದಲ್ಲಿರುವ ವಿಜಯ ವಿಠಲ ಮಂದಿರವು ಇತ್ತೀಚಿನ ದಿನಗಳಲ್ಲಿ ವಿಶ್ವ ಶಾಂತಿ ಆಶ್ರಮ ಎಂದೇ ಪ್ರಸಿದ್ದಿಯಾಗಿದೆ.ನೆಲಮಂಗಲ ತಾಲ್ಲೂಕು ಸ್ಥಳದಿಂದ 5 ಕಿ.ಮೀ (ಬೆಂಗಳೂರು ಕಡೆಗೆ) ಹಾಗೂ ಬೆಂಗಳೂರಿನಿಂದ ಸುಮಾರು 28 ಕಿ.ಮೀ ದೂರಲ್ಲಿದೆ. 1982ರಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲು ತುಮಕೂರು ಹೆದ್ದಾರಿಯಲ್ಲಿ ಅರಿಶಿನಕುಂಟೆ ಗ್ರಾಮದಲ್ಲಿ ವಿಶ್ವ ಶಾಂತಿ ಆಶ್ರಮವನ್ನು ಸ್ಥಾಪಿಸಿದರು. ಈ ಆಶ್ರಮವು ವಿಶಾಲ 08 ಎಕರೆ ಭೂ ಪ್ರದೇಶದಲ್ಲಿ ಸುಂದರವಾದ ವಿನ್ಯಾಸಗೊಳಿಸಿದ ದೇವಾಲಯಗಳನ್ನು ಮೂರ್ತಿಗಳನ್ನು ಹೊಂದಿದೆ.ಪ್ರತಿ ವರ್ಷ ದಸರಾ (ನವರಾತಿ)್ರ ಸಂದರ್ಭದಲ್ಲಿ ವಿಷೇಶ ಪೂಜೆಗಳನ್ನು ಏರ್ಪಡಿಸಲಾಗುತ್ತದೆ. ಎಲ್ಲಾ ರೀತಿಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.ಮಕ್ಕಳ ಮನೋರಂಜನೆಗಾಗಿ ಮಕ್ಕಳ ಆಟವಾಡುವ ಪ್ರದೇಶವನ್ನು ಇಲ್ಲಿ ನಿರ್ಮಿಸಿದ್ದಾರೆ.ಇಲ್ಲಿ ಮೊಲ, ಟರ್ಕಿ ಪಾರಿವಾಳ ಮತ್ತು ಇತರ ಪಕ್ಷಿಗಳನ್ನು ಇಲ್ಲಿ ನೋಡಬಹುದು.ಬೆಂಗಳೂರಿನ ಒತ್ತಡದ ಜೀವನದ ನಡುವೆ ಮನಸ್ಸಿನ ಬೇಸರ ಕಳೆಯಲು, ವಾರಾಂತ್ಯದ ಬಿಡುವಿನ ವೇಳೆಯ ಸದ್ ವಿನಿಯೋಗ ಮಾಡಿಕೊಳ್ಳಲು ಬೇಟಿ ನೀಡಬಹುದಾದ ಪ್ರಶಾಂತ ವಾತಾವರಣದ ಸುಂದರ ಸ್ಥಳ ಇದಾಗಿದೆ.

ಈ ಪ್ರವಾಸಿ ಸ್ಥಳದಲ್ಲಿರುವ ಸೌಲಭ್ಯಗಳ ವಿವರಗಳು ಈ ಕೆಳಗಿನಂತಿವೆ.

  1. ಈ ಸ್ಥಳಕ್ಕೆ ಬೇಟಿನೀಡುವ ಪ್ರವಾಸಿಗರಿಗೆ ಉತ್ತಮ ರಸ್ತೆ ಸೌಲಭ್ಯವಿದೆ.
  2. ಬೆಂಗಳೂರು, ನೆಲಮಂಗಲ ಗಳಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯಗಳಿವೆ.
  3. ಪ್ರವಾಸಿಗರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
  4. ಪ್ರವಾಸಿಗರ ಅನುಕೂಲಕ್ಕಾಗಿ, ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯವಿರುತ್ತದೆ.
  5. ಪ್ರವಾಸಿಗರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
  6. ಭಾನುವಾರ, ಬೇಟಿ ನೀಡುವ ಪ್ರವಾಸಿಗರಿಗೆ ಆಶ್ರಮದವತಿಯಿಂದ ಮದ್ಯಾಹ್ನದ ಬೊಜನ ವ್ಯವಸ್ಥೆ ಇರುತ್ತದೆ.

ತಲುಪುವ ಬಗೆ:

ವಿಮಾನದಲ್ಲಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 52 ಕಿ.ಮೀ. ದೇವನ್ಹಳ್ಳಿ

ರೈಲಿನಿಂದ

ಬೆಂಗಳೂರು ನಗರ ಮತ್ತು ಯಿಸವಂತಪುರವು 40 ಕಿ.ಮೀ ದೂರದಲ್ಲಿದೆ.

ರಸ್ತೆ ಮೂಲಕ

ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಲಭ್ಯವಿದೆ ಮತ್ತು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ 28 ಕಿ.ಮೀ ದೂರದಲ್ಲಿದೆ. .