ವೇಣುಗೋಪಾಲ ಸ್ವಾಮಿ ದೇವಸ್ಥಾನ

ನಿರ್ದೇಶನ
  • ವೇಣು ಗೋಪಾಲ ಸ್ವಾಮಿ ದೇವಸ್ಥಾನ
    ವೇಣು ಗೋಪಾಲ ಸ್ವಾಮಿ
  • ವೇಣು ಗೋಪಾಲ ಸ್ವಾಮಿ ದೇವಸ್ಥಾನ

ದೇವನಹಳ್ಳಿ ಕೋಟೆಯ ಗೋಡೆಗಳೊಳಗೆ ಕಂಡು ಬರುವ ದೇವಸ್ಥಾನಗಳಲ್ಲಿ ವೇಣುಗೋಪಾಲಸ್ವಾಮಿಯ ದೇವಸ್ಥಾನವು ಅತ್ಯಂತ ಹಳೆಯ ದೇವಸ್ಥಾನವಾಗಿದೆ. ಈ ದೇವಸ್ಥಾನದ ಗರುಡಸ್ತಂಭವು ವಿಶಾಲವಾದ ಕಮಾನು (ಬಾಗಿಲು)ಗಳನ್ನು ಹೊಂದಿದೆ. ವೇಣುಗೋಪಾಲಸ್ವಾಮಿಯ ದೇವಾಲಯದಲ್ಲಿ ರಮಾಯಣದ ದೃಶ್ಯಗಳನ್ನು ಮತ್ತು ಕೃಷ್ಣನ ಬಾಲ್ಯದ ಕುರಿತು ಚಿತ್ರಣಗೊಂಡಿದೆ. ಮತ್ತು ಈ ಸ್ತಂಭಗಳಲ್ಲಿ ಅನೇಕ ಸುಂದರವಾದ ಪ್ರತಿಮೆಗಳನ್ನು ಕೆತ್ತಲಾಗಿದೆ.

ವೇಣುಗೋಪಾಲಸ್ವಾಮಿಯ ದೇವಾಲಯದ ಶಿಲ್ಪಕಲೆಗಳು ಬೇಲೂರು ಹಾಗೂ ಹಳೇಬೀಡು ದೇವಾಲಯಗಳ ಶಿಲ್ಪಕಲೆಗಳಂತಿವೆ ಎಂದು ಹೇಳಲಾಗುತ್ತದೆ. ಈ ದೇವಾಲಯದ ಗರ್ಬಗೃಹವು ವಿಜಯನಗರ ಶೈಲಿಯಂತಿರುವ ವೇಣುಗೋಪಾಲ ಸ್ವಾಮಿಯ ಚಿತ್ರಗಳನ್ನು ಹೊಂದಿದೆ. ಇಲಿ ದ್ರಾವಿಡ ಶೈಲಿಯ ಶಿಖರ ಇದೆ. ಇಲ್ಲಿನ ನವರಂಗವು ನಾಲ್ಕು ಕಲ್ಲಿನ ಕಂಬಗಳನ್ನು ಹೊಂದಿದ್ದು ಉತ್ತಮ ಶಿಲ್ಪಕಲೆಗಳನ್ನು ಹೊಂದಿದೆ. ಅವು ಯಾವುವೆಂದರೆ ಹೆಣ್ಣುಮಕ್ಕಳ ನೃತ್ಯಕಾರ, ಶಂಖ ಕಳ್ಳ, ಹಾಗೂ ಕೆಳಭಾಗದಲ್ಲಿ ಪಕ್ಷಿಯ ರೂಪದ ಶಿಲ್ಪ ಕಲೆಯನ್ನು ಹೊಂದಿದೆ.

ತಲುಪುವ ಬಗೆ:

ವಿಮಾನದಲ್ಲಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 114 ಕಿಮೀ.

ರೈಲಿನಿಂದ

ಬೆಂಗಳೂರು ರೈಲ್ವೆ ನಿಲ್ದಾಣದಿಂದ 40 ಕಿಲೋಮೀಟರ್

ರಸ್ತೆ ಮೂಲಕ

ಟಿಪು ಕೋಟೆ ಮತ್ತು ಜನನ ಸ್ಥಳ ದೇವನ್ಹಳ್ಳಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು 40 ಕಿ.ಮೀ.