Close

ಅಮಾನಿಕೆರೆ (ಹೊಸಕೋಟೆ ಕೆರೆ)

ನಿರ್ದೇಶನ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ
  • ಹೊಸಕೋಟೆ ಕೆರೆ
  • tree-scenery--hoskote-lake-birds-shiju-sugunan-craniumbolts-birdwatching-birding-travel-photoblog-wildlife-trek-blogger-photography-bangalore-
  • maxresdefault
  • img_8606
  • img_6864-1
  • Hosakote Lake
  • IMG_2951-678x381
  • Lake
  • ಹೊಸಕೋಟೆ ಕೆರೆ1
  • Hosakote Lake view
  • ಹೊಸಕೋಟೆ ಕೆರೆ
  • Hosakote lake view

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಮೀಪದಲ್ಲಿರುವ ಅಮಾನಿದೊಡ್ಡಕೆರೆಯು ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಸುಮಾರು 600 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿರುವ ಕೆರೆಗೆ ನಂದಿ ಬೆಟ್ಟದಲ್ಲಿ ಪ್ರಾರಂಭವಾಗುವ ದಕ್ಷಿಣ ಪಿನಾಕಿನಿ ನದಿ ನೀರು ಹರಿಯುತ್ತಿದ್ದು ಕೆರೆಯ ವಿಸ್ತೀರ್ಣ ಹಾಗೂ ಉತ್ತಮವಾದ ಪರಿಸರದಿಂದಾಗಿ ಸ್ಥಳೀಯವಾದ ಕೊಕ್ಕರೆಯಂತಹ ಪಕ್ಷಿಗಳಷ್ಟೇ ಅಲ್ಲದೆ ಐರೋಪ್ಯ ರಾಷ್ಟ್ರಗಳಲ್ಲಿ ಕಂಡುಬರುವ ಪ್ಲೆಮಿಂಗೊ ಪಕ್ಷಿಗಳು ಸಹ ವಲಸೆ ಬಂದು ಒಂದೆರೆಡು ತಿಂಗಳುಗಳ ಕಾಲ ವಾಸ್ತವ್ಯ ಹೂಡಿ ನಂತರ ಹಿಂದಿರುಗುತ್ತಿವೆ. ಇವನ್ನು ಪೋಟೋದಲ್ಲಿ ಸೆರೆ ಹಿಡಿಯಲೆಂದೇ ಶನಿವಾರ ಮತ್ತು ಭಾನುವಾರಗಳಂದು ಪಕ್ಷಿಪ್ರಿಯರ ತಂಡ ಆಗಮಿಸುತ್ತಾರೆ. ಪಕ್ಷಿಗಳ ಗಣತಿ ಕಾರ್ಯ ಕೈಗೊಂಡ ಸಂದರ್ಭದಲ್ಲಿ 227 ಪ್ರಭೇಧದ ಪಕ್ಷಿಗಳು ಪತ್ತೆಯಾಗಿದ್ದು ಇವುಗಳಲ್ಲಿ ಶೇ.40 ರಷ್ಟು ವಲಸೆಯ ಪಕ್ಷಿಗಳು  ಕಂಡುಬಂದಿರುತ್ತದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದಲ್ಲಿ ಇವುಗಳನ್ನು ರಕ್ಷಿಸಲು ಸಹಕಾರಿಯಾಗಲಿದೆ.ಅಲ್ಲದೆ, ವಾಯುವಿಹಾರಕ್ಕೆ ಉತ್ತಮ ಸ್ಥಳವಾಗಿದ್ದು ತಿಂಗಳಿಗೆ 500ರಿಂದ 1000 ಪಕ್ಷಿಪ್ರಿಯ ಪ್ರವಾಸಿಗರು ಆಗಮಿಸುತ್ತಾರೆ.ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ಉತ್ತಮ ಅನುಭವಗಳನ್ನು ಪಡೆಯುವ ಮೂಲಕ ಖ್ಯಾತಿ ಪಡೆಯಲಿದೆ.

  1. ಪ್ರವಾಸಿಗರ ಅಂಕೆ ಸಂಖ್ಯೆ; ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು ತಿಂಗಳಿಗೆ ಅಂದಾಜು 2500 ರಿಂದ 3000 ದೇಶೀಯ ಹಾಗೂ ಸುಮಾರು 150 ವಿದೇಶೀಯ ಪ್ರವಾಸಿಗರು ಬೇಟಿ ನೀಡುತ್ತಾರೆ.
  2. ಪ್ರಸ್ತುತ ಯಾವುದೇ ಮೂಲಬೂತ ಸೌಲಭ್ಯ ಇರುವುದಿಲ್ಲ.
  3. 600 ಎಕರೆ ವಿಶಾಲವಾದ ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು ಪಕ್ಷಿಗಳನ್ನು ಹಾಗೂ ಅನೇಕ ಜಲಚರ ಪ್ರಾಣಿಗಳನ್ನು ನೋಡಲು ಪ್ರವಾಸಿಗರು ಬೇಟಿನೀಡುತ್ತಾರೆ. ವಾಯುವಿಹಾರಕ್ಕೆ ಸೂಕ್ತ ಸ್ಥಳವಾಗಿರುತ್ತದೆ.

ತಲುಪುವ ಬಗೆ:

ವಿಮಾನದಲ್ಲಿ

ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ದೇವನ ಹಳ್ಳಿ , ಬೆಂಗಳೂರು

ರೈಲಿನಿಂದ

ಕೆ ಆರ್ ಪುರಂ, ವೈಟ್ ಫೀಲ್ಡ್ ,ಬೆಂಗಳೂರು

ರಸ್ತೆ ಮೂಲಕ

ಹೋಸಕೊಟೆ

ವೀಡಿಯೊ