ಟಿಪ್ಪುಸುಲ್ತಾನ್ ಜನ್ಮಸ್ಥಳ
ವರ್ಗ ಐತಿಹಾಸಿಕ
1750ರಲ್ಲಿ ಟಿಪ್ಪುಸುಲ್ತಾನ್ ದೇವನಹಳ್ಳಿಯಲ್ಲಿ ಜನಿಸಿದರು. ಟಿಪ್ಪುವಿನ ಜನ್ಮ ಸ್ಥಳವು ದೇವನಹಳ್ಳಿಯ ಕೋಟೆಗೆ ಬಹಳ ಸಮೀಪದಲ್ಲಿ ಇದೆ. ಟಿಪ್ಪುಸುಲ್ತಾನ್ ಹಾಗೂ ಹೈದರಾಲಿ ಇಬ್ಬರೂ ವಾಸವಿದ್ದ ವಾಸಸ್ಥಳ ಇಂದಿಗೂ ದೇವನಹಳ್ಳಿಯಲ್ಲಿ ಇದೆ. ಟಿಪ್ಪುಸುಲ್ತಾನ್ ಮತ್ತು ಹೈದರಾಲಿ ರವರ ನ್ಯಾಯಾಲಯದಲ್ಲಿ ಉನ್ನತ ದರ್ಜೆಯ ಅಧಿಕೃತ ಅಧಿಕಾರಿಯಾಗಿದ್ದ ದಿವಾನ್ ಪೂರ್ಣಯ್ಯನವರ ಮನೆಯು ಕೋಟೆಯೊಳಗೊಡೆ ಇದೆ.
ತಲುಪುವ ಬಗೆ:
ವಿಮಾನದಲ್ಲಿ
ಬೆಂಗಳೂರು ಅಂತರಾಷ್ಡೀಯ ವಿಮಾನ ನಿಲ್ದಾಣ ದೇವನಹಳ್ಳಿಯಿಂದ 3 ಕಿ.ಮೀ ದೂರದಲ್ಲಿದೆ
ರೈಲಿನಿಂದ
ಬೆಂಗಳೂರು ಸಿಟಿ ರೈಲು ನಿಲ್ದಾಣ 45 ಕಿ.ಮೀ ಹತ್ತಿರದಲ್ಲಿದೆ
ರಸ್ತೆ ಮೂಲಕ
ಕೆ ಎಸ್ ಆರ್ ಟಿ ಸಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಸಿಗುತ್ತವೆ. ಬೆಂಗಳೂರು ಬಸ್ ನಿಲ್ದಾಣದಿಂದ 40 ಕಿ.ಮೀ ದೂರದಲ್ಲಿದೆ.