Close

ಶ್ರೀ ಶನಿಮಹಾತ್ಮ ದೇವಸ್ಥಾನ ಚಿಕ್ಕಮಧುರೆ

ನಿರ್ದೇಶನ
ವರ್ಗ ಧಾರ್ಮಿಕ
  • Sri Shanimahathma Temple, Chikka Madhure
  • ಶ್ರೀ ಶನಿಮಹಾತ್ಮ ದೇವಸ್ಥಾನ ಚಿಕ್ಕಮಧುರೆ

ಶ್ರೀ ಶನಿಮಹಾತ್ಮ ದೇವಾಲಯವು ಒಂದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ನೆಲಮಂಗಲದಿಂದ  ಸುಮಾರು 14 ಕಿ ಮೀ ದೂರದಲ್ಲಿ ಈ ದೇವಾಲಯವಿದೆ. ಈ ದೇವಸ್ಥಾನವು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬರುತ್ತದೆ. ಹಾಗೂ ಬೆಂಗಳೂರಿನಿಂದ 45 ಕಿ.ಮೀ ದೂರದಲ್ಲಿ ಇದೆ. ಈ ದೇವಾಲಯದಲ್ಲಿ ಹಿಂದು ದೇವತೆಯಾದ ಶನಿ ದೇವರನ್ನು ಪೂಜಿಸಲಾಗುತ್ತದೆ.

ಮಧುರೆಯ ಶನಿ ದೇವರ ದೇವಾಲಯವು ದಕ್ಷಿಣ ಭಾರತದ ಶೈಲಿಯ ವಾಸ್ತುಶಿಲ್ಪವಾಗಿದೆ. ಈ ದೇವಸ್ಥಾನವು ದಕ್ಷಿಣ ಭಾರತದ ದೇವಾಲಯಗಳಂತೆ ಗೋಪುರಗಳನ್ನು ಒಳಗೊಂಡಿದೆ. ಹಾಗೂ ದ್ರಾವಿಡ ವಾಸ್ತು ಶೈಲಿಯ ಗೋಪುರಗಳಲ್ಲಿ ಅನೇಕ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಶಿಲ್ಪಕಲೆಗಳು ಮನಸ್ಸಿಗೆ ಮುಟ್ಟುತ್ತವೆ.

ಈ ದೇವಾಲಯವನ್ನು ಗಂಗಾಹನುಮಯ್ಯ ಎಂಬ ರೈತನೊಬ್ಬ ನಿರ್ಮಿಸಿದನು. ಶನಿ ದೇವರು ಜನರ ಜೀವನದಲ್ಲಿನ ತೊಂದರೆಗಳನ್ನು ಶಮನಗೊಳಿಸಲಿ ಎಂದು ಈ ದೇವಸ್ಥಾನವನ್ನು ನಿರ್ಮಿಸಲಾಯಿತು.

ತಲುಪುವ ಬಗೆ:

ವಿಮಾನದಲ್ಲಿ

ಬೆಂಗಳೂರು ಅಂತರಾಷ್ಡೀಯ ವಿಮಾನ ನಿಲ್ದಾಣ ದೇವನಹಳ್ಳಿಯಿಂದ 50km ದೂರದಲ್ಲಿದೆ

ರೈಲಿನಿಂದ

ಬೆಂಗಳೂರು ಸಿಟಿ ಮತ್ತು ಯಶವಂತಪುರ ರೈಲು ನಿಲ್ದಾಣ ಹತ್ತಿರದಲ್ಲಿದೆ

ರಸ್ತೆ ಮೂಲಕ

ಕೆ ಎಸ್ ಆರ್ ಟಿ ಸಿ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಸಿಗುತ್ತವೆ. ನೆಲಮಂಗಲ ಮತ್ತು ಬೆಂಗಳೂರು ಬಸ್ ನಿಲ್ದಾಣದಿಂದ 45 ಕ.ಮೀ ದೂರದಲ್ಲಿದೆ.