ಬೆಂಗಳೂರು ಗ್ರಾಮಾಂತರ ಜಿಲ್ಹೆಗೆ ಡಿಜಿಟಲ್ ಇಂಡಿಯಾ ಪ್ರಶಸ್ತಿ ದೊರೆತಿದೆ ಡಿಜಿಟಲ್ ಇಂಡಿಯಾ ಪ್ರಶಸ್ತಿ ಸ್ವೀಕರಿಸುತ್ತಿರುವದು
          
ಆಧಾರ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಹಾಗೂ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಎಲ್ಲಾ ಹೋಬಳಿಯಲ್ಲಿ ಇರುವ ಅಟಲ್ ಜೀ ಕಛೇರಿಗಳಲ್ಲಿ ಶಾಶ್ವತ ಕೇಂದ್ರ ಸ್ಥಾಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಲು ಕೋರಿದೆ.
ಜೀವನ್ ಪ್ರಮಾಣ ಪಿಂಚಣಿದಾರರ ಮನೆಬಾಗಿಲಿಗೆ  

ಅವಿಭಜಿತ ಬೆಂಗಳೂರು ಜಿಲ್ಲೆಯು 1986ರಲ್ಲಿ ವಿಭಜನೆಗೊಂಡು, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ದಿನಾಂಕ. 01-08-1986 ರಂದು ಅಸ್ಥಿತ್ವಕ್ಕೆ ಬಂದಿದೆ. ನಂತರ ಈ ಜಿಲ್ಲೆಯು 2007ರಲ್ಲಿ ಪುನರ್ ವಿಭಜನೆಹೊಂದಿ ಹಾಲಿ ಈ ಜಿಲ್ಲೆಗೆ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕುಗಳು ಸೇರಿರುತ್ತವೆ. ಈ ಜಿಲ್ಲೆಯು ಪೂರ್ವ ದಿಕ್ಕಿನಲ್ಲಿ ಕೋಲಾರ ಜಿಲ್ಲೆ ಮತ್ತು ತಮಿಳುನಾಡು ರಾಜ್ಯ, ಪಶ್ಚಿಮ ದಿಕ್ಕಿನಲ್ಲಿ ತುಮಕೂರು ಮತ್ತು ರಾಮನಗರ ಜಿಲ್ಲೆ, ಉತ್ತರ ದಿಕ್ಕಿನಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು, ದಕ್ಷಿಣ ದಿಕ್ಕಿನಲ್ಲಿ ಬೆಂಗಳೂರು ನಗರ ಜಿಲ್ಲೆ ಗಳಿಂದ ಆವೃತಗೊಂಡಿರುತ್ತದೆ. ಈ ಜಿಲ್ಲೆಯಲ್ಲಿ ರಾ.ಹೆ.-4, ರಾ.ಹೆ.- 7, ರಾ.ಹೆ.-48 ಮತ್ತು ರಾ.ಹೆ.-209 ಹಾಯ್ದು ಹೋಗಿರುತ್ತದೆ.

ಲೆಯ ಕರ್ನಾಟಕ ರಾಜ್ಯದ ಆಗ್ನೇಯ ದಿಕ್ಕಿನಲ್ಲಿರುತ್ತದೆ. ಈ ಜಿಲ್ಲೆಯು 120 15” ದಿಂದ 130 35” ಅಕ್ಷಾಂಶ ಮತ್ತು 770 05” ದಿಂದ 780 ರೇಖಾಂಶಗಳ ನಡುವೆ ಇರುತ್ತದೆ. ಸಮುದ್ರ ಮಟ್ಟದಿಂದ 629 ರಿಂದ 950 ಮೀಟರ್ ಎತ್ತರದಲ್ಲಿರುತ್ತದೆ. ಈ ಜಿಲ್ಲೆಯ ಭೂವಿಸ್ತಾರವು 2,259 ಚ.ಕಿ.ಮೀ. ಇದ್ದು, ರಾಜ್ಯದ ವಿಸ್ತೀರ್ಣದಲ್ಲಿ 3.2% ರಷ್ಟು ಪ್ರದೇಶವನ್ನು ಹೊಂದಿರುತ್ತದೆ. ಹಾಗೂ ರಾಜ್ಯದಲ್ಲಿ 16ನೇ ಸ್ಥಾನ ಪಡೆದಿದೆ. ಈ ಜಿಲ್ಲೆಯಲ್ಲಿ ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ನದಿಗಳು ಹರಿಯುತ್ತವೆ. ಈ ಜಿಲ್ಲೆಯು ರೇಷ್ಮೆ, ಹಾಲು, ಹೂ ಮತ್ತು ಕೈಮಗ್ಗದ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಘಾಟಿ ಸುಬ್ರಮಣ್ಯಸ್ವಾಮಿ ದೇವಸ್ಥಾನ, ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟ ಮತ್ತು ವಿಜಯವಿಠಲ ದೇವಸ್ಥಾನ ಮತ್ತು ದೇವನಹಳ್ಳಿ ತಾಲ್ಲೂಕಿನ ಟಿಪ್ಪು ಸುಲ್ತಾನ ಕೋಟೆ ಇವುಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ.

2011ರ ಜನಗಣತಿ ಅನುಸಾರ ಜಿಲ್ಲೆಯ ಒಟ್ಟು ಜನಸಂಖ್ಯೆಯು 9,87,257 ಇದ್ದು, ಈ ಪೈಕಿ ಪುರುಷರು 5,07,486 ಹಾಗೂ ಮಹಿಳೆಯರು 4,79,771 ಇರುತ್ತಾರೆ. ಜನಸಾಂದ್ರತೆಯು ಪ್ರತಿ ಕಿ.ಮೀ.ಗೆ 441 ಮತ್ತು ಲಿಂಗಾನುಪಾತ 945 (ಪ್ರತಿ 1000 ಪುರುಷರಿಗೆ ಮಹಿಳೆಯರು) ಇರುತ್ತದೆ. ಜಿಲ್ಲೆಯ ಸರಾಸರಿ ವಾಡಿಕೆ ಮಳೆಯು 790 ಮಿ.ಮೀ. ಇರುತ್ತದೆ.