ದೀನ್ ದಯಾಳ್ ಅಂತ್ಯೋದಯ ಯೋಜನೆ –ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ–ನಲ್ಮ್):
ಯೋಜನೆಯ ಹಿನ್ನಲೆ:
- ಕೇಂದ್ರ ವಸತಿ ಮತ್ತು ನಗರ್ ಬಡತನ ನರ‍್ಮೂಲನ ಮಂತ್ರಾಲಯ, ಭಾರತ ರ‍್ಕಾರ, ನವದೆಹಲಿ ರವರು ಸ್ರ‍್ಣ ಜಯಂತಿ ಶಹರಿ ರೋಜ್‍ಗಾರ್ ಯೋಜನೆಯನ್ನು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯೆಂದು ಮರುನಾಮಕರಣ ಮಾಡಿ ೨೦೧೪-೧೫ನೇ ಸಾಲಿನಿಂದ ಅನುಷ್ಠಾನಗೊಳಿಸಲು ಆದೇಶವನ್ನು ಹೊರಡಿಸಿರುತ್ತಾರೆ. ಸದರಿ ಯೋಜನೆಯು ರಾಜ್ಯದ ೩೫ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿತ್ತು. ಬಾಕಿ ಉಳಿದ ೧೭೯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಲ್ಮ್ ಮಾದರಿಯಲ್ಲಿಯೇ ನಲ್ಮ್-ರಾಜ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿರುತ್ತದೆ.
- 2016-17ನೇ ಸಾಲಿನಲ್ಲಿ ನಲ್ಮ್ ಯೋಜನೆಯನ್ನು ದೀನದಯಾಳ್ ಅಂತ್ಯೋದಯ ನಲ್ಮ್ ಅಭಿಯಾನ ಎಂದು ಮರುನಾಮಕರಣ ಮಾಡಿ ೨೭೭ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸುವಂತೆ ಆದೇಶವನ್ನು ಹೊರಡಿಸಿರುತ್ತಾರೆ.
- ರಾಜ್ಯದಲ್ಲಿ ಡೇ-ನಲ್ಮ್ ಯೋಜನೆಯನ್ನು ಅನುಷ್ಠಾನಗೊಳಿಸಲು ರ‍್ಕಾರದಿಂದ ದಿನಾಂಕ:01.10.2016 ರಂದು ಆದೇಶವನ್ನು ಹೊರಡಿಸಿರುತ್ತಾರೆ.
ಯೋಜನೆಯ ಉದ್ದೇಶಃ
- ನಗರದ ಬಡಜನರನ್ನು ಬಡತನ ರೇಖೆಯಿಂದ ಮೇಲೆ ತರುವುದು.
- ನಗರ ಪ್ರದೇಶದ ಮಹಿಳಾ ಸ್ವ-ಸಹಾಯ ಸಂಘ, ನಗರ/ಪ್ರದೇಶ ಮಟ್ಟದ ಒಕ್ಕೂಟಗಳ ರಚನೆ ಮತ್ತು ಸದಸ್ಯರ ಸಬಲೀಕರಣ.
- ನಗರದ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತವಾಗಿ ಉದ್ಯೋಗಾಧರಿತ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುವುದು.
- ನಗರ ಪ್ರದೇಶದಲ್ಲಿನ ಬಡವರಿಗೆ ವೈಯಕ್ತಿಕ ಮತ್ತು ಗುಂಪು ಕಿರು ಉದ್ದಿಮೆಯನ್ನು ಸ್ಥಾಪಿಸಲು ಬ್ಯಾಂಕುಗಳಿಂದ ಸಾಲ ಮತ್ತು ಬಡ್ಡಿ ಸಹಾಯಧನವನ್ನು ಒದಗಿಸುವುದು.
- ನಗರ ಪ್ರದೇಶದ ಬೀದಿ ವ್ಯಾಪಾರಸ್ಥರನ್ನು ಗುರುತಿಸಿ, ಗುರುತಿನ ಚೀಟಿ ವಿತರಣೆ ಹಾಗೂ ಇತರೆ ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ ಸಂರ‍್ಕ ಕಲ್ಪಿಸುವುದು.
- ನಗರ ಪ್ರದೇಶದ ವಸತಿ ರಹಿತರಿಗೆ ೨೪್ಠ೭ ವಸತಿ ತಂಗುದಾಣವನ್ನು ಒದಗಿಸುವುದು.