Close

ಸಿ. ಎಂ.ಕೆ.ಕೆ.ವೈ ಯೋಜನೆ

https://skillconnect.kaushalkar.com

  1. ಮುಖ್ಯಮಂತ್ರಿಗಳಕೌಶಲ್ಯ ಕರ್ನಾಟಕ ಯೋಜನೆಯು (ಸಿ.ಎಂ.ಕೆ.ಕೆ.ವೈ) ಕರ್ನಾಟಕದ ಯುವಜನತೆಯ ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗಾಗಿ ಅಲ್ಪಾವಧಿಯ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಪ್ರಮುಖ ಯೋಜನೆಯಾಗಿದೆ.
  2. ಈ ಯೋಜನೆಯಡಿ 18-35 ವರ್ಷ ವಯಸ್ಸಿನ ಯುವಜನತೆಯು ಅಪರೆಲ್, ಲಾಜಿಸ್ಟಿಕ್ಸ್, ಬಿ.ಎಫ್.ಎಸ್.ಐ, ಐ.ಟಿ-ಐಟಿಇಎಸ್, ಆರೋಗ್ಯ, ಕೃಷಿ, ರೀಟೆಲ್, ಪ್ರವಾಸೋದ್ಯಮ ಮತ್ತು ಇತರೆ ವಲಯಗಳಲ್ಲಿನ ಸುಮಾರು 3,000 ಎನ್.ಎಸ್.ಕ್ಯೂ.ಎಫ್ ಜಾಬ್ ರೋಲ್ ಗಳಲ್ಲಿ ಉಚಿತ ಕೌಶಲ್ಯ ತರಬೇತಿಗಾಗಿ ನೋಂದಾಯಿಸಿಕೊಳ್ಳ ಬಹುದಾಗಿದೆ.
  3. ಜಿಲ್ಲೆಯಲ್ಲಿಸುಮಾರು 4 ಮಾನ್ಯತೆ ಪಡೆದ ಸಿ.ಎಂ.ಕೆ.ಕೆ.ವೈ. ಕೇಂದ್ರಗಳಲ್ಲಿ ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದೆ. ಇದುವರೆಗೆ,480 ಅಭ್ಯರ್ಥಿಗಳಿಗೆ ಈ ಯೋಜನೆಯಡಿ ತರಬೇತಿ ನೀಡಲಾಗಿದೆ.
  4. ತರಬೇತಿಯನಂತರ ಮೌಲ್ಯಮಾಪನ ನಡೆಸಿ ಅಭ್ಯರ್ಥಿಗಳನ್ನು ಪ್ರಮಾಣೀಕರಿಸಲಾಗುತ್ತಿದೆ. ಕೆ.ಎಸ್.ಡಿ.ಸಿ.ಯು ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳಿಗೆ ತರಬೇತಿಯ ನಂತರ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ.